ಸೊರಬ ತಾಲ್ಲೂಕಿನ ಉಳವಿಯ ಶ್ರೀ ಭಾರ್ಗವ ನಾಡಿಗ್ ಅವರ ಮನೆಯ ಅಂಗಳದಲ್ಲಿ ಸೊರಬ ತಾ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ತಾಲ್ಲೂಕು ಸಮಿತಿ, ತಾ. ಪರ್ತಕರ್ತರ ಸಂಘ ಸಂಯುಕ್ತವಾಗಿ ಏರ್ಪಡಿಸಿದ್ದ ಸೊರಬ ಸೈಯದ್ ಅನ್ಸರ್, ಆನವಟ್ಟಿಯ ಹಿರಿಯ ಸಾಹಿತಿ ಭೋಡ್ಕೆ, ಸಾಗರದ ಪ್ರಕಾಶ್ ಆರ್. ಕಮ್ಮಾರ್ ಅವರುಗಳಿಗೆ ನುಡಿನಮನ ಕಾರ್ಯಕ್ರಮ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಕ್ಷಣ. ಸುಂದರ ಮಲೆನಾಡು, ಹಸಿರು ಪರಿಸರದಲ್ಲಿ ನಡೆದ ಕಾರ್ಯಕ್ರಮ ಅನೇಕರ ಮೆಚ್ಚುಗೆ ಪಡೆಯಿತು. ತಾ. ಅಧ್ಯಕ್ಷರಾದ ಎಸ್. ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಧುರಾಯ ಜಿ. ಶೇಟ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಕಜಾಪ ತಾ. ಅಧ್ಯಕ್ಷರಾದ ಶ್ರೀಪಾದ ಬಿಚ್ಚುಗತ್ತಿ, ಡಾ// ಎಂ. ಕೆ. ಭಟ್, ಪಾಣಿರಾಜಪ್ಪ ನವರು, ಪತ್ರಕರ್ತರ ಸಂಘದ ತಾ. ಅಧ್ಯಕ್ಷರಾದ ಯು. ಎಂ. ನಟರಾಜ್, ಸಾಹಿತಿಗಳಾದ ಬಿ.ಎನ್.ಸಿ. ರಾವ್, ಗೌರಮ್ಮ ಎಸ್. ಭಂಡಾರಿ, ಕಜಾಪ ಮಹಿಳಾ ಘಟಕದ ಸುಜಾತಾ ಜೋತಾಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಸನ್ನಕುಮಾರ್ ದೊಡ್ಡಮನೆ ವೇದಿಕೆಯಲ್ಲಿದ್ದರು, ಮಂಜಪ್ಪ ಟಿ., ರೇವಣಪ್ಪ ಬಿದರೆಗೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭಾರ್ಗವ ನಾಡಿಗ್ ಕುಟುಂಬ ಆತಿಥ್ಯ ನೀಡಿದ್ದರು.
ವರದಿ ಮಂಜುನಾಥ ಸಿಟಿ ಶಿವಮೊಗ್ಗ ಜಿಲ್ಲೆ