ಶಿವಮೊಗ್ಗ ತಾಲೂಕಿನಲ್ಲಿರುವ ಕುಸ್ತಿ ಕ್ರೀಡೆಗಳಿಗೆ ಮತ್ತು ಕುಸ್ತಿಪಟುಗಳಿಗೆ ಮನೆಗಳಲ್ಲಿ ಮೂಲಭೂತ ವ್ಯವಸ್ಥೆಗಳು ಇರುವುದಿಲ್ಲ ಮತ್ತು ಶಿವಮೊಗ್ಗದ ಇತಿಹಾಸದಲ್ಲಿ ಮಹಾರಾಜರ ಕಾಲದಲ್ಲಿ ಕೂಡ ಕುಸ್ತಿ ಯು ನಡೆದು ಬಂದಂತಹ ಜಿಲ್ಲೆಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗರಡಿಮನೆಗಳು ಹಾಳು ಬಿದ್ದಂತಾಗಿದ್ದು ಮುಚ್ಚುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಇತ್ತೀಚಿನ ದಿನಗಳಲ್ಲಿ ಕುಸ್ತಿ ಕ್ರೀಡಾಪಟುಗಳಿಗೆ ಪ್ರತ್ಯೇಕ ಗರಡಿ ಮನೆ ಮತ್ತು ವಸತಿ ನಿಲಯ ನಿರ್ಮಿಸಬೇಕೆಂದು ಸರ್ಕಾರ ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ಸರ್ಕಾರಿ ಕೆಲಸ ನೀಡುತ್ತಿತ್ತು ಆದರೆ ಸರ್ಕಾರ ಕೆಲಸವನ್ನು ನಿಲ್ಲಿಸಿ ಇರುತ್ತದೆ. ಮತ್ತು ಹಿರಿಯ ಕುಸ್ತಿ ಪೈಲ್ವಾನರಿಗೆ ಮಾಶಾಸನ ನೀಡಿದ್ದನ್ನು ತಡೆಹಿಡಿದಿದೆ. ಆದ್ದರಿಂದ ಇನ್ನು ಮುಂದಾದರೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕ್ರೀಡಾಪಟುಗಳಿಗೆ ಸರ್ಕಾರಿ ಕೆಲಸ ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ನಿಮ್ಮ ಕಚೇರಿ ಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ