ರಾಜ್ಯದ ಮತ್ತು ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆ ಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಶಿವಮೊಗ್ಗ ನಗರದಲ್ಲಿ ವ್ಯಾಪಕವಾಗಿ ಅಪರಾಧ ಗಾಂಜಾ ಸರ ಕಳ್ಳತನ,ಕೊಲೆ ದರೋಡೆ ವಾಹನ ಕಳ್ಳತನ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ರಾಜ್ಯದ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಿ ಅಪರಾಧಗಳನ್ನ ತಡೆಗಟ್ಟಲು ಮನವಿ ಮಾಡಲಾಯಿತು.

ಶಿವಮೊಗ್ಗ ನಗರದ ಪೊಲೀಸ್ ಠಾಣೆಗಳಲ್ಲಿ ಅತಿ ಹೆಚ್ಚು ಸಿಬ್ಬಂದಿಗಳ ಕೊರತೆ ಇದ್ದು ಠಾಣಾ ಸರಹದ್ದು ವ್ಯಾಪಕವಾಗಿದ್ದು ವರಿಷ್ಠ ಉನ್ನತ ಪೊಲೀಸ್ ಅಧಿಕಾರಿಗಳ ಮೇಲೆ ಅಪರಾಧ ತಡೆಗಟ್ಟಲು ಅತಿ ಹೆಚ್ಚು ಒತ್ತಡ ಇದ್ದು ನಗರಠಾಣೆ ಗಳಲ್ಲಿ ಕೆಲವೇ ಸಿಬಂದಿಗಳನ್ನು ಇಟ್ಟುಕೊಂಡು ಅಪರಾಧಗಳನ್ನು ತಡೆಗಟ್ಟಲು ವಿಫಲರಾಗುತ್ತಿದ್ದಾರೆ ಎಂಬ ಅನುಮಾನ! ಸಾರ್ವಜನಿಕರ ಸಮಸ್ಯೆ ರೌಡಿಸಂ ಕೊಲೆ ದರೋಡೆ ಅತ್ಯಾಚಾರ ಸುಲಿಗೆ ಗಾಂಜಾ ಚೈನ್ ಸ್ನ್ಯಾಚಿಂಗ್ ದ್ವಿಚಕ್ರ ಮತ್ತು ವಾಹನ ಕಳ್ಳತನ ಮನೆಗಳ್ಳತನ ಇತರೆ ಅನೈತಿಕ ಚಟುವಟಿಕೆಗಳು ಅಪರಾಧ ಪ್ರಕರಣಗಳಿಗೆ ತಕ್ಷಣ ಕಡಿವಾಣ ಹಾಕಲು ತಡೆಗಟ್ಟಲು ಸಿಬಂದಿ ಗಳಿಲ್ಲದೆ ಹರ ಸಾಹಸಪಡುತ್ತಿದ್ದಾರೆ ಸೂಕ್ಷ್ಮವಾದ ಪ್ರದೇಶಗಳಲ್ಲಿ ಗಸ್ತು ನೈಟ್ ಬೀಟ್ ಅಪರಾಧ ಕೃತ್ಯ ಸ್ಥಳ ತಡವಾಗಿ ಭೇಟಿ ಆದ್ದರಿಂದ ಜಿಲ್ಲೆಗಳಲ್ಲಿ ಕ್ರೈಂ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ವರಿಷ್ಠ ಉನ್ನತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ, ಸರ್ಕಾರ ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಪ್ರಕರಣಗಳಿಗೆ ಅತಿ ಹೆಚ್ಚು ಮಾನ್ಯತೆಯನ್ನು ನೀಡಬೇಕಾಗಿದೆ ಆದ್ದರಿಂದ ಅತಿಶೀಘ್ರವಾಗಿ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವ ಠಾಣೆಗಳ ಮಾಹಿತಿ ಪಡೆದು ಸಿಬ್ಬಂದಿಗಳನ್ನು ನೇಮಕ ಮಾಡಿ ವ್ಯಾಪಕವಾಗಿ ಹರಡುತ್ತಿರುವ ಅಪರಾಧಗಳನ್ನ ತಡೆಗಟ್ಟಲು ಹೃತ್ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ
ಜಿಲ್ಲಾ ರಕ್ಷಣಾಧಿಕಾರಿ ಗಳಲ್ಲಿ ಮನವಿ 31 ವಾರ್ಡ್ ಗೋಪಿಶೆಟ್ಟಿಕೊಪ್ಪ ವ್ಯಾಪ್ತಿಯಲ್ಲಿ ಬರುವ ಇಲ್ಯಾಜ್ ನಗರ ನ್ಯೂ ಮಂಡ್ಲಿ ತುಂಗಾನಗರ ಹಳೆ ಮಂಡ್ಲಿ ಹಾಗೂ ಅಲ್ಪಸಂಖ್ಯಾತರ ವಾಸಿಸುತ್ತಿರುವ ಏರಿಯಾಗಳಲ್ಲಿ ಮೊಹಲ್ಲಾ ಮೀಟಿಂಗ್ ಹಗಲು ಮತ್ತು ರಾತ್ರಿ ಹೊತ್ತು ಬಿಟ್ ಪೋಲಿಸ್ ರವರ ಸಂಚಾರ ಮಾಡುವಂತೆ ಸೂಚಿಸಿ ಏರಿಯಾ ನಿವಾಸಿಗಳಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಹೃತ್ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ