ಶಿವಮೊಗ್ಗ ನ್ಯೂಸ್

ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯ ಉಪಾಧ್ಯಕ್ಷ ರಾಗಿರುವ ಶ್ರೀ ಎಸ್‌ ದತ್ತಾತ್ರಿ ರಿಗೆ ಫ್ರೆಂಡ್ಸ್ ಸೆಂಟರ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ದತ್ತಾತ್ರಿ ಯವರು ಫ್ರೆಂಡ್ಸ್ ಸೆಂಟರ್ ನನಗೆ ಮಾತೃ ಸಂಸ್ಥೆ ನನ್ನ ಸಾರ್ವಜನಿಕ ಜೀವನ ಶುರುವಾಗಿದ್ದೆ ಇಲ್ಲಿಂದ ಹಾಗಾಗಿ ಎಲ್ಲಿಯೇ ಸನ್ಮಾನಿಸಿ ದರು ಇಲ್ಲಿ ಮಾಡಿದ ಸನ್ಮಾನ ಮಹಿಳೆ ಗೆ ತವರು ಮನೆಯಲ್ಲಿ ಕರೆದು ಬಾಗಿನ ಕೊಟ್ಟ ಹಾಗೆ. ನನಗೂ ಸಂಸ್ಥೆ ಬಗ್ಗೆ ತುಂಬಾ ಅಭಿಮಾನ ವಿದೆ. ನನ್ನ ಮಾತೃಸಂಸ್ಥೆ ಒಳ್ಳೆಯ ಕೆಲಸ ಕಾರ್ಯಕ್ರಮ ಗಳಲ್ಲಿ ತೊಡಗಿಸಿ ಕೊಂಡು ಎತ್ತರಕ್ಕೆ ಬೆಳೆಯಲಿ.ನಾನು ನನ್ನ ಕೈಲಾದ ಸೇವೆ ನಿಮ್ಮ ಜೊತೆಗೆ ಸೇರಿ ಮಾಡುತ್ತೇನೆ ಎಂದು ಹಾರೈಸಿದರು.
ಕಾರ್ಯಕ್ರಮ ದಲ್ಲಿ ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ರಾದ ವಿ ನಾಗರಾಜ್, ಕಾರ್ಯದರ್ಶಿ ಆರ್ ಎಸ್ ಗೋಪಾಲಕೃಷ್ಣ ರಾವ್. ಮಹಿಳಾ ಮಂಡಳಿ ಅಧ್ಯಕ್ಷೆ ಲತಾ ರಮೇಶ್ ಹಾಗೂ ಕಾರ್ಯದರ್ಶಿ ಉಮಾ ವೆಂಕಟೇಶ ಮತ್ತು ಮಾಜಿ ಅಧ್ಯಕ್ಷ ರಾದ ಜಿ ವಿಜಯ ಕುಮಾರ್ ಮತ್ತು ಎಮ್ ಎನ್ ವೆಂಕಟೇಶ್ ವೇದಿಕೆ ಯಲ್ಲಿ ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ