ಶಿವಮೊಗ್ಗ ಮಹಾನಗರ ಪಾಲಿಕೆಯು ಹಮ್ಮಿಕೊಂಡಿರುವ2021 ನೇ ಸಾಲಿನ ಶಿವಮೊಗ್ಗ ದಸರಾ ಕಾರ್ಯಕ್ರಮದ ಭಾಗವಾಗಿ ನಡೆಯುತ್ತಿರುವ ರಂಗದಸರಾ ಪ್ರಯುಕ್ತ ಏಕಪಾತ್ರಾಭಿನಯ, ಮೂಕಾಭಿನಯ ಹಾಗೂ ಲಘು ಪ್ರಹಸನ (ಸ್ಕಿಟ್) ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಸ್ಪರ್ಧೆಗಳು ನಗರದ ಹೆಲಿಪ್ಯಾಡ್ ಬಳಿ ಇರುವ ಸುವರ್ಣ ಸಂಸ್ಕತಿ ಭವನದಲ್ಲಿ ನಡೆಯಲಿದೆ.

ಅಕ್ಟೋಬರ್ 10ರಂದು ಮದ್ಯಾಹ್ನ 3.00 ಗಂಟೆಯಿಂದ ಮೂಕಾಭಿನಯ ಸ್ಪರ್ಧೆಗಳು ನಡೆಯಲಿವೆ. ಇದು ತಂಡ ಸ್ಪರ್ಧೆಯಾಗಿದ್ದು, 18ರಿಂದ 23 ವರ್ಷ ವಯೋಮಾನದ 6 ಜನರ ತಂಡಕ್ಕೆ ಅವಕಾಶವಿದೆ. ಕಾಲಮಿತಿ ಗರಿಷ್ಠ 6 ನಿಮಿಷ. ಧ್ವನಿಮುದ್ರಿತ ಸಂಗೀತ ಬಳಸಬಹುದು. ವಿಜೇತರಿಗೆ ಪ್ರಥಮ ರೂ. 4,000, ದ್ವಿತೀಯ ರೂ.3,000, ತೃತೀಯ ರೂ.2,000 ನಗದು ಬಹುಮಾನ, ಸ್ಮರಣಿಕೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

ಅಕ್ಟೋಬರ್ 12ರಂದು ಬೆಳಿಗ್ಗೆ 11 ಗಂಟೆಯಿಂದ ಏಕಪಾತ್ರಾಭಿನಯ ಸ್ಪರ್ಧೆ ನಡೆಯಲಿದೆ. 8ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯುವುದು. ವೇಷಭೂಷಣಕ್ಕೆ ಆದ್ಯತೆ ನೀಡುವುದಿಲ್ಲ. ಧ್ವನಿಮುದ್ರಿತ ಸಂಗೀತ ಬಳಸುವಂತಿಲ್ಲ. ಸಮಯ ಗರಿಷ್ಠ 5 ನಿಮಿಷ. ವಿಜೇತರಿಗೆ ಪ್ರಥಮರೂ. 3,000, ದ್ವಿತೀಯ ರೂ.2,000, ತೃತೀಯ ರೂ.1,000 ನಗದು ಬಹುಮಾನ, ಸ್ಮರಣಿಕೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

ಅಕ್ಟೋಬರ್ 12ರಂದು ಮದ್ಯಾಹ್ನ 3.00 ಗಂಟೆಯಿಂದ ಪ್ರಹಸನ ಸ್ಪರ್ಧೆಯನ್ನು ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಗರಿಷ್ಠ 9 ಕಲಾವಿದರು ಹಾಗೂ 3 ನೇಪಥ್ಯ ಕಲಾವಿದರಿಗೆ ಅವಕಾಶವಿದೆ. ಪ್ರಹಸನದ ಅವಧಿ 10 ನಿಮಿಷ ಮೀರಬಾರದು. ಧ್ವನಿಮುದ್ರಿತ ಸಂಗೀತ ಬಳಸಬಹುದು. ವಿಜೇತರಿಗೆ ಪ್ರಥಮರೂ. 4,000, ದ್ವಿತೀಯ ರೂ.3,000, ತೃತೀಯ ರೂ.2,000 ನಗದು ಬಹುಮಾನ, ಸ್ಮರಣಿಕೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ರಂಗದಸರಾ ಸಮಿತಿ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತರು ಹೆಸರುಗಳನ್ನು ನೊಂದಾಯಿಸಲು ಈ ಕೆಳಕಂಡವರನ್ನು ಸಂಪರ್ಕಿಸಲು ಕೋರಿದೆ.

ಏಕಪಾತ್ರಾಭಿನಯ-
ಕು॥ ಧನಲಕ್ಷ್ಮಿ (83103 22906),
ಶ್ರೀ ವಿನೀತ್ (88674 42884)
ಶ್ರೀ ಮಧು ನಾಯ್ಕ್.ಎನ್ (9591484269),

ಪ್ರಹಸನ ಸ್ಪರ್ಧೆ (ಸ್ಕಿಟ್)
ಶ್ರೀಮತಿ ಶುಭ ಟಿ.ಆರ್. (91647 41585)
ಶ್ರೀ ಸುರೇಶ್ ಕೆ. (9986811496),
ಶ್ರೀ ಮಧು ನಾಯ್ಕ್ ಎನ್. (95914 84269),

ಮೂಕಾಭಿನಯ ಸ್ಪರ್ಧೆ (ಮೈಮ್)
ಶ್ರೀಮತಿ ಮೋಕ್ಷಕಾಂತ (9986815578)
ಶ್ರೀಮತಿ ರೂಪ ಬಿ.ಪಿ (94817 02926)
ಶ್ರೀ ಜಿ.ನಾಗರಾಜ್ (94853 75164)
ಶ್ರೀ ಸುರೇಶ್.ಕೆ (99868 11496)

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ