ಶಿವಮೊಗ್ಗ ನ್ಯೂಸ್…

08/10/21 ಶಿವಮೊಗ್ಗ ಮಹಾನಗರ ಪಾಲಿಕೆ, ಬೆಕ್ಕಿನ ಕಲ್ಮಠದ ವೃತ್ತದಲ್ಲಿ ಬೆಳಿಗ್ಗೆ ಐದು ಘಂಟೆಯಿಂದಲೇ ಒಂದು ತುಂತ್ತಿನ ಅನ್ನಕಾಗಿ ಕೆಲಸಕ್ಕಾಗಿ ಬರುವ ಅದೇಷ್ಟೊ ಜನರು ಅ ವೃತ್ತದಲ್ಲಿ ಸೇರುತ್ತಿದ್ದರು. ಅವರಿಗೆ ಬಿಡು ಕಾಸಿಗೆ ಅಲ್ಪ ಸ್ವಲ್ಪ ತಿಂಡಿ ತಿನಿಸುಗಳು ಈ ಸ್ಥಳದಲ್ಲಿ ದೊರೆಯುತ್ತಿತ್ತು.

ಎರಡು ವರ್ಷಗಳ ಲಾಕ್ ಡೌನ್ ನಿಂದ ಕೆಲಸ ವಿಲ್ಲವಾದರೆ ಇದರ ಜತೆ ಇದರಿಂದ ಬೀದಿ ಬದಿ ತಿಂಡಿ ತಿನಿಸುಗಳ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೂ ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ.

ಈ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಎಂದು ಒಕ್ಕಲೇಬ್ಬಿಸಿ ವರ್ಷವೇ ಕಳೆಯುತ್ತ ಬಂದರು ಇದುವರೆಗೂ ಕೆಲಸ ಮುಗಿದಿಲ್ಲ, ಮುಂದೆ ಗಾಡಿಯ ಹಾಕಲು ಹೋದರೆ ಟ್ರಾಫಿಕ್ ಜಾಮ್ ಎಂದು ಪೊಲೀಸರು ಹಾಕಲು ಬಿಡರು ಒಂದೇ ಕಡೆ ಇತರೇ ಸಾಲಗಳು ಮತ್ತೋಂದು ಕಡೆ ಪಿಎಂ ಸ್ವ ನಿಧಿ ಕಿರು ಸಾಲ, ಯಾವುದು ತಿರಿಸಲಾಗದೆ. ಕಣ್ಣಿರಿನ ನಮ್ಮ ಬಾಳು ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೊಡಿಕೊಂಡರು.

ತಕ್ಷಣವೇ ಜಿಲ್ಲಾಧ್ಯಕ್ಷರು ಅವರನ್ನ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರ ಬಳಿ ಕರೆದು ಕೊಂಡು ಹೋಗಿ ಇವರ ಎಲ್ಲಾ ಸಮಸ್ಯೆಗಳನ್ನೂ ಅವರ ಗಮನಕ್ಕೆ ತರಲಾಯಿತು.

ಬೀದಿ ಬದಿ ವ್ಯಾಪಾರಸ್ಥರ ಕುಂದು ಕೊರತೆಗಳ ಅಲಿಸಿದ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರು ಈ ಕ್ಷಣದಿಂದಲೇ ಈ ಸ್ಥಳಗಳಲ್ಲಿ ವ್ಯಾಪಾರ ಮಾಡಿ ಮುಂದಿನ ದಿನಗಳಲ್ಲಿ ಎಲ್ಲಾ ಸೌಕರ್ಯಗಳನ್ನು ನಿಮಗೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾದ ಶ್ರೀಮತಿ ಯಮುನಾ ರಂಗೇಗೌಡ, ಸದಸ್ಯರಾದ ರಮೇಶ್ ಹೆಗ್ಡೆ, ಹೆಚ್ ಸಿ. ಯೋಗಿಶ್, ಆರ್ ಸಿ ನಾಯ್ಕ್, ಮೇಹಕ್ ಶರೀಪ್, ಟಿವಿಸಿ ಸದಸ್ಯರಾದ ಶೇಷಯ್ಯ, ಅಣ್ಣಪ್ಪ, ಜಗದೀಶ, ಶೇಷಮ್ಮ, ಮಾರುತಿ, ಶರತ್, ಕಾವೇರಿ, ಮಂಜುಳಾ, ಸುವರ್ಣಮ್ಮ ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…