ಭದ್ರಾವತಿ ನ್ಯೂಸ್…
ಭದ್ರಾವತಿ. ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಹಾಗೂ ಕುಡ್ಲಿಗೆರೆ ಉಪ ಆರೋಗ್ಯ ಕೇಂದ್ರದ ವತಿಯಿಂದ ಕೂಡ್ಲಿಗೆರೆ ಗ್ರಾಮದಲ್ಲಿ ಕೋವಿಡ್ 19 ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಕೂಡ್ಲಿಗೆರೆ ಗ್ರಾಮದ ಬ್ಯಾಂಕ್ ಆಫ್ ಬರೋಡ ಮೇಲ್ಭಾಗದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ ಸರ್ಕಾರದಿಂದ ಹಲವು ಬಾರಿ ಅಭಿಯಾನ ನಡೆಸಿರುವುದರಿಂದ ನಿರೀಕ್ಷಿತ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳದ ಕಾರಣ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಮನೆಮನೆಗೆ ಭೇಟಿ ಮಾಡಿ ವ್ಯಾಕ್ಸಿನ್ ಪಡೆಯಲು ಮನವಿ ಮಾಡಿಕೊಂಡರು.
ಆದರೂ ಸಹ ನಿರೀಕ್ಷೆಯಂತೆ ಸಾರ್ವಜನಿಕರು ಪಾಲ್ಗೊಳ್ಳದ ಕಾರಣ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಚುನಾಯಿತ ಪ್ರತಿನಿಧಿಗಳು ಒಟ್ಟಿಗೆ ಸೇರಿ ಗ್ರಾಮದ ಹಾವು ಗೊಲ್ಲರ ಕ್ಯಾಂಪ್ನಲ್ಲಿ ಸಾರ್ವಜನಿಕರು ಲಸಿಕೆಯ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿ ಅವರಿಗೆ ಮನವೊಲಿಸಿ ವ್ಯಾಕ್ಸಿನ್ ನೀಡಲಾಯಿತು ನಂತರ ಅದೇ ಗ್ರಾಮದ ಅಡಿಕೆ ಮನೆಗಳಿಗೆ ತಂಡ ಭೇಟಿ ನೀಡಿ ತಾಂಡಾದ ಮಹಿಳೆಯರಿಗೆ ವ್ಯಾಕ್ಸಿಂಗ್ ಬಗ್ಗೆ ಮಾಹಿತಿ ನೀಡಿ ಅವರ ಮನವೊಲಿಸಿ ವ್ಯಾಕ್ಸಿನ್ ನೀಡಲಾಯಿತು.
ಈ ಸಂದರ್ಭದಲ್ಲಿ ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಅಂತಹ ಡಾಕ್ಟರ್ ಗಿರೀಶ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ರವರು ಹಾಗೂ ಸಿಬ್ಬಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು. ಈ ದಿನ ಒಟ್ಟು 117 ಜನ ಲಸಿಕೆ ಪಡೆದರೆ ಅದರಲ್ಲಿ 18 ರಿಂದ 44 ವಯೋಮಿತಿಯ ಮೊದಲನೇ ಡೋಸ್ 69 ಜನ ಪಡೆದರೆ ಎರಡನೇ ಡೋಸ್ 14 ಜನ ಪಡೆದರು,45 ರಿಂದ 59 ವಯೋಮಿತಿಯ ಮೊದಲನೇ ಡೋಸ್ 16 ಜನ ಪಡೆದರೆ ಎರಡನೇ ಡೋಸ್ 12 ಜನ ಪಡೆದರು,60 ವರ್ಷ ಮೇಲ್ಪಟ್ಟ ವಯೋಮಿತಿಯ ಮೊದಲನೇ ಡೋಸ್ 5 ಜನ ಪಡೆದರೆ ಎರಡನೇ ಡೋಸ್ ಒಬ್ಬರು ಪಡೆದರು.