ಪ್ರಜಾಶಕ್ತಿ ಓದುಗರಿಗೆ ಇಲ್ಲಿದೆ 1ಇಂಟ್ರೆಸ್ಟಿಂಗ್ ಸ್ಟೋರಿ . ರಾತ್ರಿ ಹನ್ನೊಂದು ಗಂಟೆ ಮೆಗ್ಗಾನ್ ಆಸ್ಪತ್ರೆಯ ಎಮರ್ಜೆನ್ಸಿ ಎಂಟ್ರಿ , ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳು ಕೈಯಲ್ಲಿ ಕೋಲು ಹಿಡ್ಕೊಂಡು ಕೋವಿಡ ವಾರ್ಡ್ ಗೆ ಹೋಗ್ತಾರೆ ಅಲ್ಲಿ ಪೇಷೆಂಟ್ ಜೊತೆಗಿರೋ ಯಾರು ಪಿಪಿಇ ಕಿಟ್ ಹಾಕಿರುವುದಿಲ್ಲವೊ ಅವರನ್ನ ಮುಲಾಜ ಇಲ್ಲದೆ ಹೊರಗೆ ಕಳಿಸುತ್ತಾರೆ. ಈಗ ಶುರುವಾಗುತ್ತೆ ಇಂಟ್ರೆಸ್ಟಿಂಗ್ ಸ್ಟೋರಿ. ಹೊರಗೆ ಬಂದವರನ್ನು ಇದೇ ಸೆಕ್ಯುರಿಟಿಗಳು ಮಾತನಾಡಿಸಿ ಪಿಪಿಇ ಕಿಟ್ ತನ್ನಿ ಒಳಗೆ ಬಿಡ್ತೀವಿ ಅಂತಾರೆ. ಸಮಯ 11.30 ಆಗಿರುತ್ತೆ ಎಲ್ಲಾ ಮೆಡಿಕಲ್ ಶಾಪ್ ಕ್ಲೂಸ್ ಆಗಿರುತ್ತೆ. ಆಗ ಪಾಪ ಜನ ಅವರಲ್ಲಿ ಕೇಳ್ತಾರೆ ಈಗ ನೋಡ್ರಿ ಆಗೋ ರಿಯಲ್ ಚೇಂಜ್ . ಇಷ್ಟೊತ್ತು ನಿಮ್ಮೇಲೆ ಕೂಗಾಡ್ತಿದ್ದ ಸೆಕ್ಯುರಿಟಿ ಈಗ ನಿಮ್ಮ ಶ್ರೇಯೋಭಿಲಾಷಿ ಆಗುತ್ತಾರೆ. ಈಗ ಶುರುವಾಗತ್ತೆ ವ್ಯಾಪಾರ . 1 ಪಿ ಪಿ ಇ ಬೆಲೆ 1000. ಇಷ್ಟೊತ್ತಿಗೆ ಒಬ್ಬ ಸೆಕ್ಯುರಿಟಿ ತನ್ನ ಜರ್ಕಿನ್ ತೆಗೆದುಕೊಂಡು ಒಳಗೆ ಹೋಗುತ್ತಾನೆ. 5 ನಿಮಿಷ ಬಿಟ್ಟು ಅದ್ರಲ್ಲಿ ಪಿಪಿಇ ಕಿಟ್ ಇಟ್ಟುಕೊಂಡು ಹೊರಬಂದು ಸೀದಾ ಎಮರ್ಜೆನ್ಸಿ ಎಂಟ್ರಿಯ ಪಕ್ಕದಲ್ಲಿರೋ ಕಾಫಿ ಶಾಪ ಅಲ್ಲಿ ಇಡುತ್ತಾನೆ. ಇತ್ತ ವ್ಯಾಪಾರ 800 ರುಪಾಯಿಗೆ ಮುಗಿಯುತ್ತೆ. ಸೆಕ್ಯೂರಿಟಿ ತನ್ನ ಗ್ರಾಹಕರನ್ನು ಕಾಫಿ ಶಾಪ್ ಹತ್ತಿರ ಕರೆದು ದುಡ್ಡು ತೆಗೆದುಕೊಂಡು ಪಿಪಿಇ ಕಿಟ್ ಕೊಡುತ್ತಾನೆ. ಈ ಎಲ್ಲಾ ವಿಜುವಲ್ ನಮ್ಮ ಕ್ಯಾಮೆರಾದಲ್ಲಿ ಸೆರೆಯಾಗಿದೆ ವಿಡಿಯೋ ನೋಡಿ .
ಪ್ರಜಾಶಕ್ತಿ ತಂಡಕ್ಕೆ ಕೆಲವು ಪ್ರಶ್ನೆಗಳು ಕಾಡುತ್ತಿವೆ.
೧. ಈ ಸೆಕ್ಯುರಿಟಿಗಳು ಹೊರಗಿನ ಮೆಡಿಕಲ್ ತೆರೆದಿರುವಾಗಲೆ ಪಿಟಿಇ ಕಿಟ್ ಚೆಕ್ ಮಾಡ್ಬಹುದಲ್ವಾ ?
೨. ಮಾನವೀಯತೆ ನೆಲೆಯಾದರೆ ಅದನ್ನು ಮೂಲ ಬೆಲೆಗೆ ಮಾಡಬಹುದಲ್ವಾ ?
೩. ಆಸ್ಪತ್ರೆ ಒಳಗಿಂದ ತರುವ ಪಿಪಿಇ ಕಿಟ್ ಗಳಿಗೆ ಸರ್ಕಾರಕ್ಕೆ ಲೆಕ್ಕ ಹೇಗೆ ಕೊಡುತ್ತಿರಬಹುದು. ಅಧಿಕಾರಿಗಳು ಶಾಮೀಲಾಗಿದ್ದಾರಾ?
ಮನೆಯಲ್ಲಿ ಆರಾಮವಾಗಿ ಕುಳಿತಿರುವ ಕೆಲವರಿಗೆ ಈ ವಿಷಯ ಕ್ಷುಲ್ಲಕ ಎನಿಸಬಹುದು . ಆದರೆ ಕೋವಿಡ ಎದುರಿಸುತ್ತಿರುವ ಆ ನೊಂದ ಜೀವಗಳಿಗೆ ಈ ಲೇಖನ ಆಶಾಕಿರಣ ವಾಗುತ್ತದೆ ಎಂಬ ನಂಬಿಕೆಯೊಂದಿಗೆ
ಟೀಮ್ ಪ್ರಜಾಶಕ್ತಿ . ವಿಡಿಯೋ ನೋಡಿ