ಶಿವಮೊಗ್ಗ ನ್ಯೂಸ್…

11/10/21 ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ 101 ಜಾತಿಗಳಲ್ಲಿ ಹಾಗೂ ನ್ಯಾ. ಸದಾಶಿವ ಆಯೋಗದ ವರದಿಯಲ್ಲಿ ಸೂಚಿಸಿರುವ ಮಾದಿಗ ಸಂಬಂಧಿತ 54 ಜಾತಿಗಳಲ್ಲಿ ಆಯೋಗದ ಇಚ್ಛಾನುಸಾರ ಸೇರಿಸಲಾಗಿರುವ ಮೋಚಿ, ಮೋಚಿಗಾರ, ಕಮತೆಮೋಚಿ, ಮಚಿಗಾರ, ಚಮ್ಮಾರ, ಚಮ್ಮಗಾರ, ಸಮಗಾರ, ಡೋಹರ, ಡೋರ, ಕಂಕಯ, ಕಕ್ಕಯ್ಯ, ಹರಳಯ, ಚಮಾಡಿಯ, ಹಾಗೂ ರೋಹಿದಾಸ್ ಎಂಬ 19 ಜಾತಿಗಳು ತ್ರಿಮತಸ್ಥ, ಚರ್ಮಕಾರ ಜಾತಿಗಳಾಗಿವೆ.

ಲಭ್ಯ, ಅಂಕಿ ಅಂಶಗಳ ಪ್ರಕಾರ ಮೇಲ್ಕಂಡ 19 ಜಾತಿಗಳನ್ನೊಳಗೊಂಡು, ಸಮಸ್ತ ಚರ್ಮಕಾರರ ಒಟ್ಟು ಜನಸಂಖ್ಯೆಯು 18 ಲಕ್ಷಕ್ಕೂ ಅಧಿಕವಿರುವ ಒಂದು ಪ್ರತ್ಯೇಕ ಜಾತಿ ಯಾಗಿರುತ್ತದೆ. ಈ 54 ಜಾತಿಗಳು “ಬಲವೂ ಅಲ್ಲ, “ಎಡವೂ ಅಲ್ಲ, ಚರ್ಮಕಾರರು ಎಂಬುದು ತನ್ನದೇ ಆದ ವಿವಿಧ ಹೆಸರುಗಳುಳ್ಳ ಸ್ವತಂತ್ರ ಜಾತಿಯಾಗಿದೆ. ಇದು ಬಸವಪೂರ್ವ ಯುಗದಿಂದಲೂ ಕರ್ನಾಟಕದಲ್ಲಿ ಚಾರಿತ್ರಿಕ ಮಹತ್ವ ಪಡೆದ ಕರಕುಶಲಿಗಳ ವೃತ್ತಿವರ್ಗಕ್ಕೆ ಸೇರಿದ ಒಂದು ಪ್ರತ್ಯೇಕ ಹಾಗೂ ಸ್ವತಂತ್ರ ಸಮುದಾಯವಾಗಿದೆ.

ಶತಮಾನಗಳಿಂದ ದೇಶದ ಎಲ್ಲ ರಾಜ್ಯಗಳಲ್ಲಿಯೂ ನೆಲೆಸಿರುವ ರಾಷ್ಟ್ರೀಯ ಸಮುದಾಯವೂ ಆಗಿದೆ. ಇವರು ಎಂದೂ ಎಲ್ಲಿಯೂ ಪ್ರತಿಭಟನೆ ಬಂಡಾಯ ದಂಗೆ ಹರತಾಳ ಮುಂತಾದವುಗಳಲ್ಲಿ ತೊಡಗಿದವರಲ್ಲ. ಚರ್ಮಕಾರರು ಭಕ್ತಿಭಂಡಾರಿ ಬಸವಣ್ಣ, ಮಹಾಸಂತ ರವಿದಾಸರು, ಮಹಾಶರಣ ಕಕ್ಕಯ ಹಾಗೂ ಮಹಾಶರಣ ಹರಳಯ್ಯರವರ ಅನುಯಾಯಿಗಳಾಗಿದ್ದು, ಭೀಮ ತತ್ವಾನುಷ್ಠಾನ ಮಾಡುವ ಸಂಯುಕ್ತ ಧಾರ್ಮಿಕ ಪ್ರವೃತ್ತಿಯವರಾಗಿದ್ದಾರೆ.

ತ್ರಿಮತಸ್ಥ ಚರ್ಮಕಾರ ಪರಿಷತ್ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಶೀಘ್ರವಾಗಿ ಸ್ಥಾಪಿಸುವಂತೆ ಕೋರಿ ಶಿವಮೊಗ್ಗ ಜಿಲ್ಲೆಯ ತ್ರಿಮತಸ್ಥ ಬಾಂಧವರು, ಪ್ರೆಸ್ ಮೀಟ್ ನಲ್ಲಿ ಮಾಧ್ಯಮಗಳ ಮೂಲಕ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ, ಮುಖ್ಯ ಮಂತ್ರಿಯವರಿಗೆ ಮನವಿ ಮಾಡಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಮುಖ್ಯ ಮಂತ್ರಿಗಳಿಗೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ತ್ರಿಮತಸ್ಥ ಪರಿಷತ್ ಪ್ರಧಾನ ಸಂಚಾಲಕರಾದ ಶ್ರೀ ಡಾ. ಗುರುರಾಜ್ ಬಿಡಿಕರ್, ಜಿಲ್ಲಾ ಸಂಚಾಲಕರಾದ ಶ್ರೀ ಆರ್. ಸತ್ಯನಾರಾಯಣ, ಶ್ರೀ ಚಂದ್ರಶೇಖರ್ ಖಾನ್ಪೇಟ್, ಶ್ರೀ ಮಂಜುನಾಥ ಎಲ್, ಶ್ರೀ ಚನ್ನವೀರಪ್ಪ ಗಾಮನಗಟ್ಟಿ, ಶ್ರೀ ಗುರುಸ್ವಾಮಿ ವೈ. ಅಬ್ದುಲ್ ಖಾನಿ, ಶ್ರೀ ನಾಗರಾಜ್ ಎಲ್ ಗಾಮನಗಟ್ಟಿ, ಶ್ರೀ ಶಂಕರ್ ಬಿಡಿಕರ್, ಶ್ರೀ ಗಂಗಾಧರ್ ಹೊಂಗಲ್, ಶ್ರೀ ಹರೀಶ್ ಸಾಣಿಕೆ, ಶ್ರೀ ಪರಶುರಾಮ್ ಸಾಣಿಕೆ, ಶ್ರೀ ಗಂಗಾಧರ್. ಹೆಚ್, ಶ್ರೀ ಪ್ರಕಾಶ್. ಡಿ, ಶ್ರೀ ಆರ್.ರಮೇಶ್, ಶ್ರೀಮತಿ ಶಶಿಕಲಾ, ಶ್ರೀ ಲಕ್ಷ್ಮಣ, ಪ್ರಮುಖರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…