ಕಾಡಾನೆಗಳ ಕಾಟದಿಂದ ಉಂಬಳೇಬೈಲು ಗ್ರಾಮದ ರೈತರು ಕಂಗಾಲು.
ಆನೆಗಳ ದಾಳಿ ತಡೆಗಟ್ಟಲು ಅರಣ್ಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ಉಂಬಳೇಬೈಲು ಗ್ರಾಮದ ಚಂದ್ರಶೇಖರ್ ಗೌಡ್ರು ಅವರು ಜಮೀನಿನಲ್ಲಿ ಬೆಳೆದಿದ್ದ ಬತ್ತದ ತೇನೆಗೆ ಬೆಳಗ್ಗೆ ರಾತ್ರಿ ಆನೆ ಬಂದು ಬತ್ತದ ಬೆಳೆಯನ್ನು ತಿಂದು ತುಳಿದು ಸಂಪೂರ್ಣ ಹಾಳುಮಾಡಿದೆ ಕೋವಿಡ್ ಮಹಾ ಕಾಯಿಲೆಯಿಂದ ತತ್ತರಿಸಿದ ಜನರು ಮತ್ತೆ ಆನೆ ದಾಳಿಯಿಂದ ತತ್ತರಿಸುತ್ತಿದ್ದಾರೆ ಅನೇಕ ಬಾರಿ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರು ಇದನ್ನು ತಡೆಗಟ್ಟಲು ಅರಣ್ಯಾಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ಅರಣ್ಯಾಧಿಕಾರಿಗಳು ಆನೆ ದಾಳಿ ಮಾಡಿದಂತ ರೈತರಿಗೆ ಪರಿಹಾರ ನೀಡಬೇಕೆಂದು ಮತ್ತೆ ಮನೆ ಹತ್ತಿರ ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.