ನಮ್ಮ ಟಿವಿ ಶಿವಮೊಗ್ಗ

ಶಿವಮೊಗ್ಗ: ನೂನ್ಯತೆಗಳೇ ಸಾಧನೆಗೆ ಮೆಟ್ಟಿಲು, ಅಂಗವಿಕಲತೆ ಎಂಬುದು ಶಾಪವಲ್ಲ, ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಎಂದು ಕರ್ನಾಟಕದ ಹ್ಯೂಮನ್ ಕಂಪ್ಯೂಟರ್ ಬಸವರಾಜ್ ಉಮ್ರಾಣಿ ಹೇಳಿದರು.


ಶಿವಮೊಗ್ಗ ನಗರದಲ್ಲಿ ನಮ್ಮ ಟಿವಿ ಮತ್ತು ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಗಣಿತ ವಿಷಯವು ಕಲಿಕೆಗೆ ಕಷ್ಟವೇನಲ್ಲ. ಸಾಧಿಸುವ ಛಲ, ಆತ್ಮವಿಶ್ವಾಸ ಹಾಗೂ ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಎಲ್ಲವೂ ಸುಲಭವಾಗುತ್ತದೆ ಎಂದು ತಿಳಿಸಿದರು.


ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದು, ಅವುಗಳಿಂದ ದೂರವಾಗಿ ಪುಸ್ತಕದ ಅಧ್ಯಯನದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಯೋಗ, ಪ್ರಾಣಾಯಮ, ದೈಹಿಕ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.


ಎಲ್ಲರೂ ಕೆಟ್ಟ ಅಭ್ಯಾಸಗಳಿಂದ ದೂರ ಇರಬೇಕು. ಉತ್ತಮ ಜೀವನ ಮಾರ್ಗದ ಬಗ್ಗೆ ಸದಾ ಉತ್ತಮ ಆಲೋಚನೆ ನಡೆಸಬೇಕು. ಯಶಸ್ಸು ಸಾಧಿಸುವ ಬಗ್ಗೆ ಮಾಡಬೇಕಾದ ಕಾರ್ಯಚಟುವಟಿಕೆಗಳ ಸದಾ ಗಮನ ವಹಿಸಬೇಕು. ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.


ನಾನು ಸಾಧಿಸಿರುವುದು ಇನ್ನೂ ಸ್ವಲ್ಪ ಮಾತ್ರ, ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿರುವುದು ಬಹಳಷ್ಟಿದೆ. ಗಿನ್ನಿಸ್ ದಾಖಲೆ ಹಾಗೂ ಐಎಎಸ್ ಮಾಡುವ ಛಲ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಗಣಿತ ವಿಷಯಕ್ಕೆ ಸಂಬAಧಿಸಿದ ಗೊಂದಲ ಇದ್ದಲ್ಲಿ ನನಗೆ ಕರೆ ಮಾಡಿದರೆ ಅಗತ್ಯ ಸಲಹೆ ನೀಡುತ್ತೇನೆ ಎಂದು ತಿಳಿಸಿದರು.


ಅಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ಸಾಧಕರನ್ನು ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಪ್ರತಿಭಾವಂತರನ್ನು ಸಮಾಜಕ್ಕೆ ಪರಿಚಯಿಸುವ ಜತೆಯಲ್ಲಿ ಇತರರಿಗೂ ಸಾಧನೆ ಮಾಡುವಂತೆ ಪ್ರೇರೆಪಿಸುವ ಕೆಲಸವನ್ನು ಎಲ್ಲ ಸಂಘ ಸಂಸ್ಥೆಗಳು ಮಾಡಬೇಕು ಎಂದು ಹೇಳಿದರು.
ಬಸವರಾಜ್ ಉಮ್ರಾಣಿ ಅವರು ಕರ್ನಾಟಕ ಹ್ಯೂಮನ್ ಕಂಪ್ಯೂಟರ್ ಎಂದೇ ಖ್ಯಾತಿ ಆಗಿರುವ ಜತೆಯಲ್ಲಿ ರಾಜ್ಯ, ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಶಸ್ತಿ, ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. ರಾಜ್ಯ, ರಾಷ್ಟç ಮಟ್ಟದಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.


ನಮ್ಮ ಟಿವಿಯ ಮಾಲೀಕ ಜಗದೀಶ್, ಮಾಜಿ ಪ್ರಧಾನ ಕಾರ್ಯದರ್ಶಿ ಎ.ಅಶೋಕ್, ಕಾರ್ಯದರ್ಶಿ ಮಲ್ಲಿಕಾರ್ಜುನ ಕಾನೂರ, ಸುಪ್ರಿಯಾ, ಶ್ರೀಕಾಂತ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…