ಗದಗ ನ್ಯೂಸ್…
ಗದಗ.ನೂರಾರು ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರಾರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಜನಪದ ಕೂಗು ಶಿಕ್ಷಣ ನೀಡಿದ ,ನಾಡು ನುಡಿ ಹೋರಾಟಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಮಾಡುತ್ತಿರುವ ರೈತಪರ ಹೋರಾಟಗಾರ ಖ್ಯಾತ ಜನಪದ ಕಲಾವಿದ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರ ಜನಪದ ಕ್ಷೇತ್ರದಲ್ಲಿನ ಸಾಧನೆಯನ್ನು ಗಮನಿಸಿ ಗುರುಕುಲ ಕಲಾ ಪ್ರತಿಷ್ಠಾನ (ರಿ) ರಾಜ್ಯ ಘಟಕ ತುಮಕೂರು ಇವರ ವತಿಯಿಂದ ತುಮಕೂರು ಸಿದ್ಧಗಂಗಾಮಠದ ಶ್ರೀ ಉದ್ಧಾನೇಶ್ವರ ಸಮುದಾಯ ಭವನದಲ್ಲಿ ನಡೆದ ಪ್ರಥಮ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದ ಸಮಾರಂಭದಲ್ಲಿ “ಗುರುಕುಲ ಜಾನಪದ ಜೇನ್ಗೋಡ ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ
ಪ್ರಾಧಿಕಾರದ ಅಧ್ಯಕ್ಷರಾದ ಮಾನ್ಯ ಶ್ರೀ ಟಿ.ಎಸ್.ನಾಗಾಭರಣ,ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾನ್ಯ ಶ್ರೀ ದೊಡ್ಡರಂಗೇಗೌಡರವರು,ಮಾನ್ಯ ಶ್ರೀ ವಿದ್ಯಾವಾಚಸ್ಪತಿ ಕಲಾ ಸಾರ್ವಭೌಮ ಡಾ.ಕವಿತಾಕೃಷ್ಣರವರು,ಜನಪದ ಕಲಾವಿದರಾದ ಶ್ರೀ ಗುರುರಾಜ ಹೊಸಕೋಟೆಯವರು,ಗುರುಕುಲ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಹುಲಿಯೂರು ದುರ್ಗ ಲಕ್ಷ್ಮಿ ನಾರಾಯಣರವರು,ಸಂಸ್ಥಾಪಕ ಕಾರ್ಯಧ್ಯಕ್ಷರಾದ ಡಾ.ಶಿವರಾಜ ಗೌಡರು, ಗೌರವ ಸಲಹೆಗಾರರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ, ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ಧುಮೂರ್ತಿ,ಶ್ರೀ ಮತಿ ಡಾ.ಪುಣ್ಯವತಿ ಸಿ ನಾಗರಾಜ,ಕನ್ನಡ ಸಾಹಿತ್ಯ ಪರಿಷತ ತುಮಕೂರು ಜಿಲ್ಲಾಧ್ಯಕ್ಷರಾದ ಬಾ.ಹ.ರಮಾಕುಮಾರಿ,ಚಲನಚಿತ್ರ ನಟಿ ಶ್ರೀಮತಿ ಮಾಲತಿ ಶ್ರೀಯವರು,ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ಎಚ್ ಎಸ್ ನಾಗರಾಜಶೆಟ್ಟಿ ಯವರು,ಸೇರಿದಂತೆ ನಾಡಿನ ಕವಿಗಳು ಕಲಾವಿದರು ಪಾಲ್ಗೋಂಡಿದ್ಧರು.