ಶಿವಮೊಗ್ಗ ನ್ಯೂಸ್…
ಮಹರ್ಷಿ ವಾಲ್ಮೀಕಿಯವರು ಹಿಂದೂಗಳ ಪವಿತ್ರ ಗ್ರಂಥವಾದ ಶ್ರೀ ರಾಮಾಯಣವನ್ನು ಬರೆದವರು
ಮಹರ್ಷಿ ವಾಲ್ಮೀಕಿಯವರ ಅಮರ ಕಾವ್ಯ ರಾಮಾಯಣ ಇಂದಿಗೂ ಅಜರಾಮರ
ರಾಮಾಯಣವು ಭಾರತೀಯರ ಜೀವನ ಚರಿತ್ರೆ ಮತ್ತು ಸಂಸ್ಕೃತಿ ಸಂಸ್ಕಾರವನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ ಹಾಗಾಗಿ ಮಹರ್ಷಿ ವಾಲ್ಮೀಕಿಯವರ ಅಮರ ಕಾವ್ಯ ಎಂದೆಂದಿಗೂ ಅಜರಾಮರ ಎಂದು ರೋಟರಿ ಪೂರ್ವ ಶಿವಮೊಗ್ಗ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿಗಳಾದ ರೋಟರಿ ಜೀ ವಿಜಯ್ ಕುಮಾರ್ ಹೇಳಿದರು
ಇಂದು ಬೆಳಿಗ್ಗೆ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಮಾತನಾಡಿದರು.
ಪ್ರಾಚೀನ ಭಾರತೀಯ ಆದಿಕವಿ ರಾಮಾಯಣದ ಲೇಖಕ ಹಾಗೂ ಮೊದಲ ಕಾವ್ಯದ ಮೊದಲ ಕರ್ತೃ ಹಾಗೂ ತತ್ವಜ್ಞಾನಿ ಮಹರ್ಷಿ ವಾಲ್ಮೀಕಿಯವರ ಆದರ್ಶ ಗುಣಗಳು ಇಂದಿನ ಮಕ್ಕಳಿಗೆ ತಿಳಿದುಕೊಳ್ಳುವ ಅಗತ್ಯತೆ ಇದೆ. ಈ ಭೂಮಂಡಲದಲ್ಲಿ ಬೆಟ್ಟಗಳು ಪರ್ವತಗಳು ನದಿಗಳು ಇರುವವರೆಗೂ ರಾಮಾಯಣ ಪ್ರಸಾರಗೊಳ್ಳುತ್ತಲೆ ಇರುತ್ತದೆ ಹಾಗಾಗಿ ರಾಮಾಯಣ ಇರುವವರೆಗೂ ವಾಲ್ಮೀಕಿಯ ಹೆಸರು ಪ್ರಜ್ವಲಿಸುತ್ತದೆ.
ಸಮಾರಂಭದಲ್ಲಿ ರೋಟರಿ ಪೂರ್ವದ ಪ್ರಾಂಶುಪಾಲರಾದ ಶ್ರೀಯುತ ಸೂರ್ಯನಾರಾಯಣ್ ಹಾಗೂ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಜಯಶೀಲ ಬಾಯಿ ಮತ್ತು ಟ್ರಸ್ಟಿಗಳು ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.