ಶಿವಮೊಗ್ಗ ನ್ಯೂಸ್…

ಮಾನವ ಕಂಪ್ಯೂಟರ್ ಎಂದೇ ಪ್ರಖ್ಯಾತಿ ಗಳಿಸಿರುವ ಅಂದ
ಪ್ರತಿಭೆ ರಾಷ್ಟç ಪ್ರಶಸ್ತಿ ಪುರಸ್ಕೃತ ಬಸವರಾಜ್
ಉಮ್ರಾಣಿಯವರಿಗೆ ನಗರದ ಪ್ರತಿಷ್ಠಿತ ಇನ್ನರ್ ವ್ಹೀಲ್ ಕ್ಲಬ್
ಶಿವಮೊಗ್ಗ ಪೂರ್ವ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ
ಗೌರವ ಸಮರ್ಪಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ
ಉಮ್ರಾಣಿಯವರು ನನ್ನ ಸಾಧನೆಗೆ ನಿಮ್ಮೆಲ್ಲರ ಸಲಹೆ ಸ್ಪೂರ್ತಿ
ಸಹಕಾರವೇ ಕಾರಣ. ದೇವರು ಕಣ್ಣನ್ನು ಕಿತ್ತುಕೊಂಡರೂ
ಹತ್ತು ಪ್ರತಿಭೆಗಳನ್ನು ನನಗೆ ನೀಡಿದ್ದಾರೆ. ಎಂದರೇ ಅದಕ್ಕೆ
ನಾನೇ ಸಾಕ್ಷಿ. ಎಂದ ಅವರು ಇನ್ನರ್ ವ್ಹೀಲ್ ಕ್ಲಬ್ಬುಗಳ
ಸೇವೆಗಳನ್ನು ಸ್ಮರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು
ಇನ್ನರ್ ವ್ಹೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ಜಯಂತಿ
ವಾಲಿರವರು ವಹಿಸಿ ಮಾತನಾಡುತ್ತ ಇನ್ನರ್ ವ್ಹೀಲ್ ಸಂಸ್ಥೆ ಸಮಾಜದಲ್ಲಿ
ಸಾರ್ಥಕ ಸೇವೆ ಸಲ್ಲಿಸಿದ ಗಣ್ಯರನ್ನು ಸಾಧಕರನ್ನು
ಒಳ್ಳೆಯಪ್ರತಿಭೆಗಳನ್ನು ಹಾಗೂ ಆರ್ಥಿಕವಾಗಿ ಹಿಂದುಳಿದ
ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದರ ಜೊತೆಗೆ
ವಿದ್ಯಾಭ್ಯಾಸಕ್ಕೆ ಧನ ಸಹಾಯ ಮಾಡುತ್ತಾ ಬಂದಿದೆ ಎಂದು ನುಡಿದರು.
ಹಾಗೆ ಬಸವರಾಜ ಉಮ್ರಾಣಿಯವರ ಸಾಧನೆ ನಮ್ಮ ನಾಡಿಗೆ ಹೆಮ್ಮ ತಂದಿದೆ. ಇದರಿಂದ ಇನ್ನು ಹೆಚ್ಚಿನ ಸೇವೆ ಸಲ್ಲಲಿ. ಹಾಗೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ಬಿನ ಕಾರ್ಯದರ್ಶಿ
ಹಾಗೂ ಮಾಜಿ ಅಧ್ಯಕ್ಷರಾದ ಬಿಂದು ವಿಜಯಕುಮಾರ್, ವೀಣಾ ಹರ್ಷ,
ರಾಜೇಶ್ವರಿ ಪ್ರತಾಪ್, ಮಮತಾ ಸುದೀಂಧ್ರ, ಆಶಾ ಶ್ರೀಕಾಂತ್, ಉಮಾ
ವೆಂಕಟೇಶ್, ವಾಣಿಪ್ರವೀಣ್, ವೇದ ನಾಗರಾಜ್, ಮದುರ ಮಹೇಶ್,
ಸಂಧ್ಯಾ, ರೂಪಾ ಮಲ್ಲಿಕಾರ್ಜುನ್, ವಾಗ್ದೇವಿ ಬಸವರಾಜ್, ಹಾಗೂ ಇನ್ನರ್
ವ್ಹೀಲ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…