ಶಿವಮೊಗ್ಗ ನ್ಯೂಸ್…

ಮಾಚೇನಹಳ್ಳಿಯಲ್ಲಿರುವ ಸಾಯಿ ಗಾರ್ಮೆಂಟ್ಸ್ನಿಂದ ನಿದಿಗೆ ಕೆರೆ ಹಾಗೂ ಸಿರಿಗೆರೆ ಕೆರೆಗೆ ತ್ಯಾಜ್ಯ ನೀರು ನೇರವಾಗಿ ಬಿಡುತ್ತಿದ್ದು, ಇದರಿಂದ ಪರಿಸರ ಮಾಲೀನ್ಯವಾಗುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ವಿನಯ್ ಕೆ.ಸಿ. ರಾಜಾವತ್ ದೂರಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾರ್ಮೆಂಟ್ಸ್ನಲ್ಲಿ ಉತ್ಪಾದನೆಯಾಗುತ್ತಿರುವ ಕಲುಷಿತ ನೀರನ್ನು ಶುದ್ಧೀಕರಿಸಿ ಬಿಡಬೇಕೆಂಬ ನಿಯಮವಿದ್ದರೂ ಕೂಡ ಅದನ್ನು ಪಾಲಿಸುತ್ತಿಲ್ಲ.ಚೆಕ್ ಡ್ಯಾಂ ನಿರ್ಮಾಣ ಮಾಡಿ ಅಲ್ಲಿ ನೀರು ಶುದ್ಧೀಕರಿಸಿ ಬಳಿಕ ಜಲಮೂಲಗಳಿಗೆ ನೀರು ಬಿಡಬೇಕು.ಅದನ್ನು ಪಾಲಿಸುತ್ತಿಲ್ಲ ಎಂದು ಹೇಳಿದರು.

ಇಂತಹ ನೀರಿನಿಂದ ಅಂತರ್ಜಲ ಕೂಡ ವಿಷಪೂರಿತವಾಗಲಿದೆ. ಜಲಚಲರಗಳು ಬದುಕುವುದಿಲ್ಲ. ಬೆಳೆಗಳಿಗೆ ನೀರು ಹರಿಸಿದರೆ ಯಾವುದೇ ಬೆಳೆ ಕೂಡ ಸರಿಯಾಗಿ ಬರುವುದಿಲ್ಲ. ಇದನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಪರಿಸರ ಮಂಡಳಿಯ ಗಮನಕ್ಕೂ ತರಲಾಗಿದೆ. ಆದರೆ, ಯಾರೂ ಕೂಡ ಇದರ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ದೂರಿದರು. ರಾಜಕೀಯ ಒತ್ತಡ ಇರುವುದರಿಂದ ಯಾವೊಬ್ಬ ಅಧಿಕಾರಿಯೂ ಕೂಡ ಇದರ ಬಗ್ಗೆ ಮಾತನಾಡುತ್ತಿಲ್ಲ. ಇದರ ಪರಿಣಾಮವನ್ನು ಸ್ಥಳೀಯರು ಹಾಗೂ ಕೃಷಿಕರು ಅನುಭವಿಸುವಂತಾಗಿದೆ. ಹೀಗಾಗಿ ಸಂಬಂಧಿಸಿದವರು ಕೂಡಲೇ ಕ್ರಮ ಜರುಗಿಸುವಂತೆ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶಿವು, ನಿಖಲ್, ಚಂದನ್ ಸಿಂಗ್ ಇದ್ದರು. 

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…