ಹೊಸನಗರ ನ್ಯೂಸ್…
ದಿನಾಂಕಃ-22-10-2021 ರಂದು ಬೆಳಗಿನ ಜಾವ ಪಿಎಸ್ಐ ಹೊಸನಗರ ರವರಿಗೆ ಬಟ್ಟೆಮಲ್ಲಪ್ಪ ಕಡೆಯಿಂದ ಹೊಸನಗರ ಕಡೆಗೆ ಗೂಡ್ಸ್ ಆಟೋದಲ್ಲಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಠಾಣಾ ವ್ಯಾಪ್ತಿಯ ಮಾವಿನಕೊಪ್ಪ ವೃತ್ತದ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅಲ್ಲಿಗೆ ಬಂದ KA18B7789 ಗೂಡ್ಸ್ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಆರೋಪಿತರು ಮೀನುಗಳನ್ನು ಸಾಗಾಟ ಮಾಡಲು ಬಳಸುತ್ತಿದ್ದ ಆಟೋದಲ್ಲಿನ ಡ್ಯಾಶ್ ಬೋರ್ಡ್ ನಲ್ಲಿ ಮಾದಕ ವಸ್ತು ಗಾಂಜಾವನ್ನು ಇಟ್ಟುಕೊಂಡು ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ.
ನಂತರ ಎರಡು ಜನ ಆರೋಪಿತರನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ 30,000/- ರೂಗಳ ಒಟ್ಟು 1 ಕೆಜಿ 500 ಗ್ರಾಂ ತೂಕದ ಒಣ ಗಾಂಜಾ, 01 ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ ಗೂಡ್ಸ್ ಆಟೋವನ್ನು ವಶಪಡಿಸಿಕೊಂಡು ಗುನ್ನೆ ಸಂಖ್ಯೆ:0105/2021 ಕಲಂ 8(c),20(B)(ii)(b) NDPS ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.