ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ನಗರ ವಿನೋಭನಗರದ ಕರಿಯಣ್ಣ ಬಿಲ್ಡಿಂಗ್ ಹತ್ತಿರ ಭೂಮಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ “ನಮ್ಮ ಗ್ರಂಥಾಲಯ” ಹೆಸರಿನಲ್ಲಿ ಗ್ರಂಥಾಲಯ ಉದ್ಘಾಟನೆಗೊಂಡಿದೆ.
‘ ಜಯನಗರ 4th ಬ್ಲಾಕ್’ ,’ರಾಮ ರಾಮರೇ’ , ‘ಒಂದಲ್ಲಾ ಎರಡಲ್ಲಾ’, ‘ಮ್ಯಾನ್ ಆಫ್ ದಿ ಮ್ಯಾಚ್’, ಕನ್ನಡ ಚಿತ್ರಗಳ ಸೂತ್ರಧಾರ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ಚಿತ್ರಕಥೆಗಾರ ಮತ್ತು ನಿರ್ದೆಶಕ ಡಿ ಸತ್ಯ ಪ್ರಕಾಶ್ ಅವರು ಭೂಮಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ “ನಮ್ಮ ಗ್ರಂಥಾಲಯ” ಹೆಸರಿನ ಗ್ರಂಥಾಲಯ ಉದ್ಘಾಟಸಿದರೆ. ಈ ಸಂದರ್ಭದಲ್ಲಿ “ಮ್ಯಾನ್ ಆಫ್ ದಿ ಮ್ಯಾಚ್” ನಿರ್ಮಾಪಕರಾದ ಮಯೂರ ಫಿಲ್ಮ್ಸ್ ನ ಮಂಜುನಾಥ್ ಅವರನ್ನು ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ಅವರು ಸನ್ಮಾನಿಸಿ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರಕ್ಕೆ ಶುಭಕೋರಿದರ.

ಡಿ ಸತ್ಯ ಪ್ರಕಾಶ್ ನಿರ್ದೇಶನದ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ವಿಶೇಷ ಕಥೆಯ ಚಿತ್ರಿ ಇದಾಗಿದ್ದು, ಚಿತ್ರದಲ್ಲಿ ಎರಡು ಹಾಡುಗಳಿದ್ದು ಯೋಗರಾಜ್ ಭಟ್ ಮತ್ತು ವಿ ಮನೋಹರ್ ಅವರು ಸಾಹಿತ್ಯ ಬರೆದಿದ್ದರೆ, ಪುನೀತ್ ರಾಜಕುಮಾರ್ ಅವರು ಹಾಡಿದ್ದಾರೆ. ಕನ್ನಡ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದು ಕಾರ್ಯಕ್ರಮದಲ್ಲಿ ಡಿ ಸತ್ಯಪ್ರಕಾಶ್ ಕೇಳಿಕೊಂಡಿದ್ದಾರೆ. ಹಾಗೆ ನಮ್ಮ ಗ್ರಂಥಾಲಯ ಮಾದರಿಯಲ್ಲಿ ಎಲ್ಲಾ ಸ್ಥಳಗಳಲ್ಲೂ ಇದೇ ರೀತಿ ಗ್ರಂಥಾಲಯ ಇರಬೇಕೆಂದು ಡಿ ಸತ್ಯ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಭೂಮಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ನಿರ್ದೇಶಕ ಡಿ ಸತ್ಯಪ್ರಕಾಶ್, ನಿರ್ಮಾಪಕ ಮಂಜುನಾಥ್, ಚಲನಚಿತ್ರ ನಟರಾದ ಚಂದ್ರು, ಮಲೆನಾಡಿನ ಸಾಹಿತ್ಯ ಬರಹಗಾರ ಪುನೀತ್ ಶೆಟ್ಟಿ, ಕನ್ನಡ ಚಲನಚಿತ್ರಗಳು ಮಲೆನಾಡು ಭಾಗದ ಪ್ರಚಾರಕ ರಘು ಗುಂಡ್ಲು ಉಪಸ್ಥಿತಿ ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…