ಶಿವಮೊಗ್ಗ ನ್ಯೂಸ್…
ರೋಟರಿ ಶಿವಮೊಗ್ಗ ಪೂರ್ವ ಮತ್ತು ಆರೋಗ್ಯ ಇಲಾಖೆ, ವಿನೋಬನಗರ ಸ್ನೇಹಜೀವಿ ಗೆಳೆಯರ ಬಳಗ ಹಾಗೂ ಸಂಗಮ್ ಹೆಲ್ತ್ ಕೇರ್ ಸಂಯುಕ್ತ ಆಶ್ರಯದಲ್ಲಿ ಉಚಿತ ಕೋವಿಡ್-19 ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳವರು, ಬಸವ ಕೇಂದ್ರ ಶಿವಮೊಗ್ಗ, ಬಸವತತ್ವ ಪೀಠ ಚಿಕ್ಕಮಂಗಳೂರು, ಇವರು ಉದ್ಘಾಟಿಸಿ ಮಾತನಾಡುತ್ತಾ ಕೋವಿಡ್ ಮಾರಿಯನ್ನು ಓಡಿಸಲು ಎಲ್ಲರೂ ಪ್ರಥಮ ಮತ್ತು ದ್ವಿತೀಯ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಲೇಬೇಕು ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಕೋವಿಡ್ ನಿಯಮಗಳನ್ನು ಪಾಲಿಸಿ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದು ಆಗಲೇ ಅಕ್ಕಪಕ್ಕದ ದೇಶಗಳಲ್ಲಿ ಹಾಗೂ ರಾಜ್ಯಗಳಲ್ಲಿ ಮೂರನೇ ಅಲೆ ಲಕ್ಷಣಗಳು ಕಂಡು ಬರುತ್ತಿರುವುದು ಆಘಾತ ಉಂಟುಮಾಡಿದೆ ಸಾರ್ವಜನಿಕರು ಮೈಮರೆತು ಮಾಸ್ಕ್ ಬಳಸದೆ ಓಡಾಡುತ್ತಿರುವುದು ಹಾಗೂ ಮೂಢನಂಬಿಕೆಯಿಂದ ಲಸಿಕೆ ತೆಗೆದುಕೊಂಡರೆ ಬೇರೇನು ಆಗುತ್ತದೆ ಎಂದು ಭಾವಿಸಿ ತೆಗೆದುಕೊಳ್ಳುತ್ತಿಲ್ಲ. ಎಲ್ಲರೂ ಯಾವುದೇ ಭಯಪಡದೆ ಲಸಿಕೆ ತೆಗೆದುಕೊಂಡು ಕರೋನಾ ರೋಗದಿಂದ ದೂರ ಇರಲು ಸಹಕರಿಸಿ ಸರ್ಕಾರದ ನಿಯಮವನ್ನು ಪಾಲಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಶ್ರಮ ಬಿದ್ದು ದೇಶದ ಜನತೆಗೆ ಮನೆ ಮನೆ ಬಾಗಿಲಿಗೆ ಲಸಿಕಾ ಕೇಂದ್ರ ತೆರೆದು ಲಸಿಕೆಯನ್ನು ನೀಡುವಲ್ಲಿ ಯಶಸ್ವಿಯಾಗುತ್ತಿದೆ ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಸಂಗಮ್ ಹೆಲ್ತ್ ಕೇರ್ ನಿರ್ದೇಶಕರಾದ ಡಾ. ವರುಣ್ ರವರು ಮಾತನಾಡುತ್ತಾ ಈಗಾಗಲೇ ಸಾರ್ವಜನಿಕರಲ್ಲಿ ಜಾಗೃತಿ ಮೂಡುತ್ತಿದ್ದು ಇನ್ನೂ ಹೆಚ್ಚು ಜಾಗೃತಿ ಮೂಡಿಸಿ ಎಲ್ಲರೂ ಲಸಿಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕಾದರೆ ಮೊಗ್ಗ ಜಿಲ್ಲೆಯಾದ್ಯಂತ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಅಧಿಕಾರಿಗಳು ವೈದ್ಯಾಧಿಕಾರಿಗಳ ಪರಿಶ್ರಮದಿಂದ ಜಿಲ್ಲಾದ್ಯಂತ ಲಸಿಕಾ ಕೇಂದ್ರಗಳನ್ನು ತೆರೆದು ಉಚಿತ ಉಚಿತ ಕೋವಿಡ್ ಲಸಿಕೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಇದನ್ನು ಎಲ್ಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಲಸಿಕೆ ತೆಗೆದುಕೊಂಡು ಕೋವಿಡ್ ಸಾಂಕ್ರಾಮಿಕ ಮಹಾಮಾರಿ ಇಂದ ದೂರವಿರಲು ಕೋರುತ್ತೇವೆ, ಮತ್ತೆ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಲಸಿಕೆ ಬರುತ್ತಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ, ಎಲ್ಲ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮಾಸ್ಕ್ ಧರಿಸಿ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಬೇಕಾಗಿ ಕೋರುತ್ತೇನೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಅವರು ಮಾತನಾಡುತ್ತಾ ಸಮಾಜಕ್ಕೆ ಅನುಕೂಲವಾಗುವ ಕೆಲಸಗಳಲ್ಲಿ ನೋಟವೇ ಯಾವಾಗಲೂ ಮುಂದಿರುತ್ತದೆ ಅಂತೆಯೇ ಈ ದಿನ ಕೋವಿಡ್ ಉಚಿತ ಲಸಿಕೆ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವಿನೋಬನಗರ ಸ್ನೇಹಜೀವಿ ಬಳಗ ಸಂಯೋಜನೆಯೊಂದಿಗೆ ಮಾಡಿಸಿಕೊಳ್ಳುತ್ತಿರುವುದು ತುಂಬಾ ಹೆಮ್ಮೆಯಾಗಿದೆ, ಸಾರ್ವಜನಿಕರು ಅತಿಹೆಚ್ಚಿನ ಸಂಖ್ಯೆಯಲ್ಲಿ ಬಂದು ಕೋವಿಡ್ ಲಸಿಕೆಯನ್ನು ತೆಗೆದುಕೊಂಡು ರೋಗದಿಂದ ದೂರ ಇರಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿನೋಬನಗರ ಸ್ನೇಹಜೀವಿ ಗೆಳೆಯರ ಬಳಗದ ಶರತ್ ರವರು ಗೆಳೆಯರೊಂದಿಗೆ 7ನೇ ಹಂತದ ಚಿತ್ತ ಲಸಿಕಾ ಶಿಬಿರವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಕಮ್ಯುನಿಟಿ ಸರ್ವಿಸ್ ನಿರ್ದೇಶಕರು ವಿಜಯ್ ಕುಮಾರ್ ಜಿ ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ವಿನೋಬನಗರ ಸ್ನೇಹಜೀವಿ ಗೆಳೆಯರ ಬಳಗ ಶರತ್ ಶಿವಮೂರ್ತಿ, ಕೃಷ್ಣ, ಭರತ್, ಶ್ರೀಕಾಂತ್ ,ಮಂಗಳಮ್ಮ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಕೋವಿಡ್ ನೂಡಲ್ ಆಫೀಸರ್ ಡಾ. ಸತೀಶ್, ಡಾ. ಶ್ರೀಧರ್, ರುದ್ರೇಶ್ ಎಚ್ ಏನ್ ಉಪಸ್ಥಿತರಿದ್ದರು.