ಶಿವಮೊಗ್ಗ ನ್ಯೂಸ್…

ಜಿಲ್ಲಾ ಬಿಜೆಪಿ ವತಿಯಿಂದ ಲಸಿಕಾ ವಾರಿಯರ್ಸ್ ಗಳಿಗೆ ಹಮ್ಮಿಕೊಂಡಿದ್ದ ಲಸಿಕಾ ಅಭಿನಂದನಾ ಅಭಿಯಾನದ ನಿಮಿತ್ತ ಇಂದು ಶಿವಮೊಗ್ಗ ನಗರದ ಬಾಪೂಜಿನಗರದ ನಗರ ಆರೋಗ್ಯ ಕೇಂದ್ರದ ವೈದ್ಯಕೀಯ ಮತ್ತು ಇನ್ನಿತರ ಸಿಬ್ಬಂದಿಗಳ ಪಾದಗಳನ್ನು ತೊಳೆದು ಪುಷ್ಪರ್ಚನೆ ಮಾಡುವ ಮೂಲಕ ಅಭಿನಂದಿಸಲಾಯಿತು….

ಈ ಸಂಧರ್ಭದಲ್ಲಿ ಮಾನ್ಯ ಗ್ರಾಮೀಣಾಭಿರುದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪನವರು ಹಾಗೂ ಕರೋನ ಲಸಿಕಾ ಅಭಿಯಾನದ ಶಿವಮೊಗ್ಗ ಜಿಲ್ಲಾ ಸಂಚಾಲಕರು ಹಾಗೂ KSSIDC ಯ ಉಪಾಧ್ಯಕ್ಷರಾದ ಶ್ರೀ ಎಸ್ ದತ್ತಾತ್ರಿ ಯವರು ಉಪಸ್ಥಿತರಿದ್ದು ಎಲ್ಲಾ ಸಿಬ್ಬಂದಿಗಳನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು…..

ಕಾರ್ಯಕ್ರಮದಲ್ಲಿ ಆರೋಗ್ಯಕೇಂದ್ರ ವೈದ್ಯಧಿಕಾರಿಗಳಾದ ಡಾ. ರೇಣುಕಾ ಕೆ.ಆರ್, ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಸುರೇಖಾ ಮುರಳಿಧರ್, ಪಾಲಿಕೆ ಸದಸ್ಯರಾದ ಶ್ರೀ ಧೀರರಾಜ್, ಆರತಿ ಅ.ಮಾ ಪ್ರಕಾಶ್, ಮಹಾಶಕ್ತಿಕೇಂದ್ರದ ಹಿಂದಿನ ಅಧ್ಯಕ್ಷರಾದ ಶ್ರೀ ನಾಗರಾಜ್ ರವರು ಸೇರಿದಂತೆ ಸಿಬ್ಬಂದಿಗಳಾದ ಜಯಮ್ಮ, ನಿರ್ಮಲಾ, ದಿವ್ಯಾ, ರಾಕೇಶ್, ರೋಹನ್, ಸ್ವಾತಿ, ಸಂದ್ಯಾ, ಜ್ಯೋತಿ, ಶ್ವೇತ, ಹರ್ಷಿತ, ಧನಂಜಯ, ಶೃತಿ ಉಪಸ್ಥಿತರಿದ್ದರು….

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…