ಶಿವಮೊಗ್ಗ ನ್ಯೂಸ್…
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿ., (ಕರ್ನಾಟಕ ಸರ್ಕಾರದ ಉದ್ಯಮ) ವತಿಯಿಂದ ಅ.29ರ ನಾಳೆ ಬೆಳಿಗ್ಗೆ 10ಗಂಟೆಗೆ ಜೈಲು ರಸ್ತೆಯಲ್ಲಿರುವ ಸುಬ್ಬಯ್ಯ ಆಸ್ಪತ್ರೆ ಎದುರಿನ ತ್ರಿಶಾನ್ ಎಂಟರ್ಪ್ರೆ ಸಸ್ನಎಲ್ಲಿ ಮೈಸೂರು ಸ್ಯಾಂಡಲ್ಸ್ನ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನೆ ನೆರವೇರಲಿದೆ.
ದೇಶದ ಸುಗಂಧ ರಾಯಭಾರಿಯಂದೆ ಹೆಸರಾಗಿರುವ ಶುದ್ಧ ನೈಸರ್ಗಿಕ ಶ್ರೀಗಂಧದೆಣ್ಣೆ ಯುಕ್ತ ಉತ್ಪನ್ನ ಗುಣಮಟ್ಟದ ಮೈಸೂರು ಸ್ಯಾಂಡಲ್ನ ಸೋಪ್, ಸುಗಂಧ ದ್ರವ್ಯಗಳು, ಪೌಡರ್, ಅಗರಬತ್ತಿ, ಧೂಪ, ಡಿಂಟರ್ಜೆಂಟ್ಗ ಳು ಸೇರಿದಂತೆ 10 ಹಲವು ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ ಎಂದು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿ.,ನ ನಿರ್ದೇಶಕಿ ನಿವೇದಿತಾ ರಾಜು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬೆಂಗಳೂರು, ಮೈಸೂರು, ಬೆಳಗಾವಿ, ಚಿತ್ರದುರ್ಗದಲ್ಲಿ ಮಾರಾಟ ಮಳಿಗೆಗಳಿದ್ದು, ಇದೇ ಪ್ರಥಮ ಬಾರಿಗೆ ಶ್ರೀಗಂಧದ ತವರು ಹಾಗೂ ಮಲೆನಾಡ ಮಡಿಲ ಶಿವಮೊಗ್ಗದಲ್ಲಿ ಮಳಿಗೆ ಆರಂಭಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು, ಶಿವಮೊಗ್ಗದ ಶ್ರೀಗಂಧದೆಣ್ಣೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಅಗರಬತ್ತಿ ತಯಾರಿಕ ಯೋಜನೆಯನ್ನು ಸಹ ರೂಪಿಸಲು ಉದ್ದೇಶಿಲಾಗಿದೆ ಎಂದರು.
ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮೇಯರ್ ಸುನೀತಾ ಅಣ್ಣಪ್ಪ, ಎಂಐಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿ.,ನ ಅಧ್ಯಕ್ಷರು ಹಾಗೂ ಶಾಸಕರಾದ ಮಾಡಳ್ ವಿರೂಪಾಕ್ಷಪ್ಪ, ಆಡಳಿತ ನಿರ್ದೇಶಕ ಮಹೇಶ್ ಬಿ.ಶಿರೂರ್, ಮಹಾಪ್ರಬಂಧಕ ಸಿ.ಎಂ.ಶಿವಕುಮಾರ್, ನಿರ್ದೇಶಕರಾದ ಮಲ್ಲಿಕಾರ್ಜುನ ಸವಕ್ಕರ್, ಶಿವಕುಮಾರ್ ಹುಡೇದ್ ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪದ್ಮಿನಿ, ವಿದ್ಯಾ ಉಪಸ್ಥಿತರಿದ್ದರು.