ಶಿವಮೊಗ್ ನ್ಯೂಸ್…

ಕಲೆಯೇ ಇಲ್ಲದೆ ಥೈರಾಯ್ಡ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರ ತಂಡ ನಡೆಸಿ ಐತಿಹಾಸಿಕ ಸಾಧನೆ ಮಾಡಿದೆ.ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಅತಿ ವಿನೂತನ ಶಸ್ತ್ರಚಿಕಿತ್ಸೆಯೊಂದನ್ನು ನೆರವೇರಿಸುವಲ್ಲಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದು, ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲು ಸ್ಥಾಪಿಸಿದ್ದಾರೆ ಎಂದು ಆಸ್ಪತ್ರೆಯ ಎಂ.ಡಿ. ಡಾ. ನಾಗೇಂದ್ರ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಿಕ್ಕಮಗಳೂರಿನ 17ವರ್ಷದ ಬಾಲಕಿಗೆ ಥೈರಾಯ್ಡ್ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಆಕೆ ಹಾಗೂ ಅವರ ಕುಟುಂಬಸ್ಥರು ಶಸ್ತ್ರಚಿಕಿತ್ಸೆಯ ಬಗ್ಗೆ ಆತಂಕಗೊಂಡಿದ್ದರು. ಆದರೆ ಈ ನೂತನ ವಿಧಾನದ ಬಗ್ಗೆ ತಿಳಿಸಿದ ನಂತರ ಒಪ್ಪಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಆದಾದ ಅರ್ಧಗಂಟೆಯಲ್ಲಿಯೇ ಆಕೆ ಮಾತನಾಡಲು ಆರಂಭಿಸಿದಳು. ಮೊದಲ ದಿನ ಕೇವಲ ದ್ರವ ರೂಪದ ಆಹಾರ ನೀಡಲಾಯಿತು. ಮರುದಿನದಿಂದ ಸಾಮಾನ್ಯ ಆಹಾರ ತೆಗೆದುಕೊಳ್ಳಲು ಸೂಚಿಸಲಾಯಿತು. ಈಗ ಆಕೆ ಆರೋಗ್ಯದಿಂದಿದ್ದಾಳೆ ಎಂದು ಆಸ್ಪತ್ರೆಯ ಎಂಡೋಕ್ರೈನ್ ಮತ್ತು ಅಂಕೋಪ್ಲಾಸ್ಟಿಕ್ ಸ್ತನ ಚಿಕಿತ್ಸಕ ಡಾ. ಶ್ರೇಯಾಂಸ ಎಂ. ತಿಳಿಸಿದರು.ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಡೇ ಕೇರ್ ರೀತಿಯಲ್ಲಿ ಕೇವಲ 24ಗಂಟೆಗಳ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಹಿಂತಿರುಗಬಹುದಾಗಿದೆ.

ಸಾಮಾನ್ಯವಾಗಿ ಕುತ್ತಿಗೆ ಭಾಗದಲ್ಲಿ ಚರ್ಮವನ್ನು ಕೊಯ್ದು ಶಸ್ತ್ರಚಿಕಿತ್ಸೆ ನಡೆಸಿ ಹೊಲಿಗೆ ಹಾಕಲಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆಯಾದ ಭಾಗದಲ್ಲಿ ಕಲೆ ಅಥವಾ ಗುರುತು ಉಳಿಯುತ್ತದೆ. ಅತ್ಯಂತ ಸುಧಾರಿತ ವಿಧಾನದ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಕಲೆ ಅಥವಾ ಗುರುತು ಉಳಿಯುವುದಿಲ್ಲ. ಬಾಯಿಯ ಒಳಭಾಗದಲ್ಲಿ ರಂದ್ರ ಮಾಡಿ ಜಾಗದಲ್ಲಿ ಹಾಕುವ ಸಣ್ಣ ಹೊಲಿಗೆ ತಾನಾಗಿಯೆ ಕರಗಿ ಹೋಗುವುದರಿಂದ ಕಲೆ ಉಳಿಯುವುದಿಲ್ಲ. ಈ ವಿಧಾನದಲ್ಲಿ ಶಸ್ತ್ರಚಿಕತ್ಸೆ ಮಾಡಿಕೊಂಡರೆ 2-3 ದಿನದ ಒಳಗಾಗಿ ಆಸ್ಪತ್ರೆಯಿಂದ ಮನೆಗೆ ತೆರೆಳಬಹುದು ಎಂದ ಅವರು, ಈ ಶಸ್ತ್ರಚಿಕಿತ್ಸೆಗೆ ಸುಮಾರು 80 ಸಾವಿರ ರೂ. ಖರ್ಚಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಡಾ.ನಾರಾಯಣ್ ಪಂಜಿ, ಡಾ.ಬಲ್ಲಾಳ್, ಡಾ.ಶಿವಕುಮಾರ್, ಡಾ.ಕೌಶಿಕ್ನಾುರಾಯಣ, ಡಾ.ಸ್ವಾತಿ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…