ಶಿವಮೊಗ್ಗ ನ್ಯೂಸ್…

ಮಾಜಿ ರಾಜ್ಯ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ, ನಮ್ಮ ಜಿಲ್ಲಾ ಸಂಸ್ಥೆಯ ಸಂಸ್ಥಾಪಕರು ಹಾಗೂ ರಾಜಧರ್ಮ ಪ್ರಸಕ್ತ ಮಾನ್ಯ ಜಸ್ಟೀಸ್ ಕೆ. ಶಂಕರನಾರಾಯಣರಾವ್ ರವರ ೧೪೨ನೇ ಜನ್ಮ ಶತಮಾನೋತ್ಸವ ದಿನಾಚರಣೆಯನ್ನು ಜಿಲ್ಲಾ ಸ್ಕೌಟ್ ಭವನದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.

ಮಾನ್ಯ ಜಸ್ಟೀಸ್ ಕೆ. ಶಂಕರನಾರಾಯಣರಾವ್ ರವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸ್ಕೌಟ್ ಆಯುಕ್ತರಾದ ಶ್ರೀ ಕೆ.ಪಿ. ಬಿಂದುಕುಮಾರ್‌ರವರು ಅವರ ಸೇವೆ, ಕೊಡುಗೆ ಅಪಾರ. ಚೀಫ್ ಬಾಯ್ ಸ್ಕೌಟ್ ಆಫ್ ಮೈಸೂರು, ಅಂತರಾಷ್ಟಿçÃಯ ಸಂಸ್ಥೆಯಿAದ ಸಿಲ್ವರ್ ವುಲ್ಫ್ ಅವಾರ್ಡ್, ವಿಶ್ವ ಚೀಫ್ ಬಾಯ್ ಸ್ಕೌಟ್ ಕಮೀಷನರ್, ರಾಜಧರ್ಮ ಪ್ರಸಕ್ತ ಹೀಗೆ ಅನೇಕ ಅವಾರ್ಡ್ಗಳನ್ನು ಪಡೆದಿರುವಂತದ್ದು ನಮ್ಮ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ವಿಷಯ ಹಾಗೂ ಸಮಾಜಮುಖಿಯಾಗಿ ಹಲವಾರು ಸೇವಾ ಕಾರ್ಯಗಳನ್ನು ಮಾಡಿದ ನ್ಯಾಯಮೂರ್ತಿಯವರನ್ನು ನೆನೆಯುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯ. ಇಂತಹ ಮಹನೀಯರ ತತ್ವ ಆದರ್ಶ ಗುಣಗಳು ಇಂದಿನ ಜನತೆಗೆ ವಿಶೇಷವಾಗಿ ಸ್ಕೌಟ್ಸ್-ಗೈಡ್ಸ್, ರೋರ‍್ಸ್-ರೇಂರ‍್ಸ್ ಹಾಗೂ ಎಲ್ಲರಿಗೂ ದಾರಿದೀಪವಾಗಿದೆ.

ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ. ರಮೇಶಶಾಸ್ತಿçà ರವರು ಮಾತನಾಡಿ ಮಾನ್ಯ ಜಸ್ಟೀಸ್ ಕೆ. ಶಂಕರನಾರಾಯಣರಾವ್ ರವರು ಕರ್ನಾಟಕದಲ್ಲಿ ಜನಿಸಿ ಅಂತರಾಷ್ಟಿçÃಯ ಮಟ್ಟದವರೆಗೂ ಬೆಳೆದು, ನಮ್ಮ ಸ್ಕೌಟ್-ಗೈಡ್ಸ್ ಸಂಸ್ಥೆಯು ಬೆಳೆಯಲು ಸಹಕಾರ ಮಾಡಿಕೊಟ್ಟಿರುವ ಮಹಾನ್ ವ್ಯಕ್ತಿ, ಇಂತಹ ಮಹಾನ್ ಚೇತನದ ಸ್ಮರಣಾರ್ಥ ಹಾಗೂ ಅವರ ಅನುಪಮ ಸೇವೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ, ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಜಸ್ಟೀಸ್ ಕೆ. ಶಂಕರನಾರಾಯಣರಾವ್‌ರವರ ಸೇವೆ, ಕೊಡುಗೆ, ಸಾಧನೆ ಅಪಾರವಾದದ್ದು, ಆದ್ದರಿಂದ ಎಲ್ಲ ಮಕ್ಕಳು ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು, ಅವರ ದಾರಿಯಲ್ಲಿ ನಡೆಯಲು ನಾವೆಲ್ಲರೂ ಸಹ ಪ್ರಯತ್ನ ಮಾಡೋಣ, ರಾಷ್ಟç- ಅಂತರಾಷ್ಟೀಯ ಮಟ್ಟದವರೆಗೆ ಸ್ಕೌಟ್ಸ್-ಗೈಡ್ಸ್ನ ಪ್ರತಿಭೆ ಗೊತ್ತಾಗಬೇಕು ಎಂದು ನುಡಿದರು.

ಜಿಲ್ಲಾ ಕಾರ್ಯದರ್ಶಿಯಾದ ಶ್ರೀ ಹೆಚ್. ಪರಮೇಶ್ವರ್‌ರವರು ಸ್ವಾಗತಿಸಿದರು, ಎಸ್,ಜಿ.ವಿ ಕುಮಾರಿ ಸುಮಲತ ಕೆ ವಂದಿಸಿದರು ಹಾಗೂ ಪಿ.ಆರ್.ಒ ಶ್ರೀ ಜಿ. ವಿಜಯ್‌ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಈ ಪವಾರ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀ ವೈ.ಆರ್.ವೀರೇಶಪ್ಪ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶ್ರೀ ಡಿ.ಎನ್.ನೂರ್ ಅಹಮ್ಮದ್, ಸಹಕಾರ್ಯದರ್ಶಿ ಶ್ರೀ ರಾಜೇಶ್ ಅವಲಕ್ಕಿ, ಕಬ್-ಬುಲ್‌ಬುಲ್,ಸ್ಕೌಟ್ಸ್-ಗೈಡ್ಸ್,ರೋರ‍್ಸ್-ರೇಂರ‍್ಸ್ ಮಕ್ಕಳು ಹಾಗೂ ಕಛೇರಿ ಸಿಬ್ಬಂಧಿಗಳು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…