ಶಿವಮೊಗ್ಗ ನ್ಯೂಸ್…

ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯು ನೆಹರು ಯುವ ಕೇಂದ್ರ ಮತ್ತು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಸಹಯೋಗದಲ್ಲಿ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 5 ನೇ ದಿನ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಎಂ. ಆರ್. ಎಸ್. ವೃತ್ತದ ಹತ್ತಿರ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಆರಿಸಿ ಜನಜಾಗೃತಿ ಮಾಡಲಾಯಿತು.

ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಮಾತನಾಡುತ್ತಾ ಪರಿಸರದ ಘೋಷಣೆಗಳನ್ನು ಹೇಳಿಕೊಟ್ಟರು ಮತ್ತು ಸಿಂಗಲ್ ಯೂಸ್ ಪ್ಲಾಸ್ಟಿಕ್ (ಒಮ್ಮೆ ಬಳಸುವ ಪ್ಲಾಸ್ಟಿಕ್) ನಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ತಿಳಿಸಿದರು. ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಶ್ರಿಮತಿ. ಬ್ರಿಜಿತ್ ವರ್ಗೀಸ್ ಭಾಗವಹಿಸಿ ನಾವೆಲ್ಲ ಪ್ರತಿನಿತ್ಯ ಸ್ವಚ್ಛತೆಗೆ ಆದ್ಯತೆ ನೀಡೋಣ ಎಂದು ತಿಳಿಸಿದರು.

ಶ್ರೀ. ಚಿದಾನಂದ ಎಸ್ ವಟಾರೆ, ವ್ಯವಸ್ಥಾಪಕ ನಿರ್ದೇಶಕರು ಹಾಗು ಶ್ರೀ. ರಂಗನಾಥ್ ನಾಯಕ್, ಮುಖ್ಯ ಅಭಿಯಂತರರು, ಇವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದವರು, ಪ್ರಮುಖರಾದ ಶ್ರೀ. ವಿಜಯ್ ಕುಮಾರ್, ಶ್ರೀ. ಕೃಷ್ಣಪ್ಪ, ಶ್ರೀ. ಶರತ್ ಬಾಬು, ಶ್ರೀ. ರತ್ನಾಕರ್, ಶ್ರೀ. ತಿಮ್ಮಪ್ಪ ಇನ್ನಿತರರು ಹಾಗೂ ನೆಹರು ಯುವ ಕೇಂದ್ರದ ಅಧಿಕಾರಿಯಾದ ಶ್ರೀ ಉಲ್ಲಾಸ್, ರೊಟೇರಿಯನ್ ವಿಜಯ್ ಕುಮಾರ್, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ವೆಂಕಟೇಶ್, ಶ್ರೀ ತ್ರಿಶೂಲ್, ಶ್ರೀ ನಾಗರಾಜನಾಯ್ಕ್, ಶ್ರೀ ರಾಜುನಾಯ್ಕ್, ಮಲ್ಲಿಕಾರ್ಜುನ್, ಕೇತನ, ಆಶಾ, ಸ್ವಯಂಸೇವಕರು ಗಳಾದ ಪುನೀತ್ ಬೆಳ್ಳೂರು, ಗಣೇಶ್, ಜಯಂತ್ ಬಾಬು, ರಮೇಶ್, ಕೇಶವ್, ಅರುಣ್, ರಾಚಪ್ಪ, ಭೂಮಿಕಾ ಇನ್ನಿತರರು ಮತ್ತು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ವೇಣುಗೋಪಾಲ್, ಸುರೇಶ್ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸ್ವಚ್ಛತಾ ಅಭಿಯಾನ ಒಂದು ವಾರಗಳ ಕಾಲ ನಡೆದಿದ್ದು ನಾಳೆ ಬೆಳಿಗ್ಗೆ 10.30 ರಿಂದ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಜೋಗ ಜಲಪಾತದ ಆವರಣವನ್ನು ಸುಮಾರು ಇನ್ನೂರಕ್ಕೂ ಹೆಚ್ಚು ಸ್ವಯಂ ಸೇವಕರೊಂದಿಗೆ ಸ್ವಚ್ಛಗೊಳಿಸುವುದರೊಂದಿಗೆ ಸ್ವಚ್ಛತಾ ಸಪ್ತಾಹದ ಸಮಾರೋಪ ಕಾರ್ಯಕ್ರಮವು ನಡೆಯುವುದು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…