ವಿಶ್ವ ಹಸಿವಿನ ದಿನ 28-5-2021 ಅಂಗವಾಗಿ ಶಿಕ್ಷಕಿಯರ ಸಂಘದ ವತಿಯಿಂದ ಇಡೀ ದಿನ ಕೋವಿಡ ಸಂಕಷ್ಟದ ಪರಿಸ್ಥಿತಿಯಲ್ಲಿ ನಾಲ್ಕಾರು ಜನರ ಹಸಿವನ್ನು ನೀಗಿಸುವ ಕಾರ್ಯ ಮಾಡೋಣ ಎಂದು ತೀರ್ಮಾನಿಸಿದರು ಆಸಕ್ತ ಶಿಕ್ಷಕಿಯರಿಂದ ಒಂದಿಷ್ಟು ಹಣವನ್ನು ಸಂಗ್ರಹಿಸಿ ಸ್ವ ಇಚ್ಛೆಯಿಂದ ಹಣವನ್ನು ಹಾಕಿಕೊಂಡು ಹಸಿದವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯವನ್ನು ಮಾಡಿದರು.ಶಿವಮೊಗ್ಗದ ನವುಲೆ ಸಮೀಪದ ಟೆಂಟ್ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸಿದರು.ಶಿಕ್ಷಕಿಯರ ಅಳಿಲು ಸೇವಾ ಕಾರ್ಯಕ್ಕೆ ಹಲವು ಶಿಕ್ಷಕಿ ಮಿತ್ರರು ಕೈಜೋಡಿಸಿರುವುದು ಪ್ರಶಂಸನಾರ್ಹ.

ಶಿಕ್ಷಕಿಯರ ಸಂಘವು ಲಾಕ್ ಡೌನ್ ಸಮಯದಲ್ಲಿ ಶಿಕ್ಷಕಿಯರಿಗೆ ಉಪಯೋಗವಾಗಲಿ ಎಂದು ಹಲವು ಗೂಗಲ್ ಮೀಟ್ ಗಳನ್ನು ಹಮ್ಮಿಕೊಂಡಿದ್ದು ಶೈಕ್ಷಣಿಕವಾಗಿಯೂ ತೊಡಗಿಸಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ರಾಧಾ, ಉಪಾಧ್ಯಕ್ಷೆ ಅನಿತ ಕೃಷ್ಣ , ಪ್ರಧಾನ ಕಾರ್ಯದರ್ಶಿ ಪುಷ್ಪಾ ನರೇಗೌಡ, ತಾಲ್ಲೂಕು ಅಧ್ಯಕ್ಷೆ ಶಾಹೀನಾ ಬಾನು , ಶರಾವತಿ, ಲಲಿತಮ್ಮ, ಶಾಂತಿ ಅಗ್ನಿಸ , ಗೀತಾ ಇನ್ನಿತರರು ಉಪಸ್ಥಿತರಿದ್ದರು . ಪೂರ್ಣಿಮಾ, ನಾಗರತ್ನ, ಭಾಗ್ಯಜ್ಯೋತಿ, ಪಾರ್ವತಮ್ಮ, ಲಕ್ಷ್ಮಿ, ಶಿಕ್ಷಕಿಯರು ಆಹಾರ ಕಿಟ್ ಪೂರೈಕೆಗೆ ಧನಸಹಾಯ ಮಾಡಿದರು. ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜ್ ಪಿ ಇವರು ಶಿಕ್ಷಕಿಯರ ಸೇವಾ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ