ಶಿವಮೊಗ್ಗ ನ್ಯೂಸ್…

ಇತ್ತೀಚಿಗೆ ಪ್ರಕಟಗೊಂಡ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ನೀಟ್) ಶಿವಮೊಗ್ಗದ ವಿದ್ಯಾರ್ಥಿ ರಜತ್ ಆರ್ ಪಾಂಡುರಂಗಿ ಇಂಡಿಯಾ ರ್ಯಾಂ ಕಿಂಗ್ ನಲ್ಲಿ 2296 ರಾಂಕ್ ಪಡೆದು ಶಿವಮೊಗ್ಗ ಜೆಲ್ಲೆಗೆ ಟಾಪರ್ ಆಗಿದ್ದಾರೆ.

ಇವರು ರಸಾಯನಶಾಸ್ತ್ರ ದಲ್ಲಿ 99.9℅ ಭೌತಶಾಸ್ತ್ರದ ಲ್ಲಿ 99.5%  ಮತ್ತು ಜೀವಶಾಸ್ತ್ರ ದಲ್ಲಿ 99.4% ಒಟ್ಟು 720 ಅಂಕಗಳಲ್ಲಿ 663 ಅಂಕಗಳನ್ನು ಗಳಿಸಿದ್ದಾರೆ.ದೀಕ್ಷಾದ ಅಧ್ಯಾಪಕರ ಮಾರ್ಗದರ್ಶನ ದಲ್ಲಿ ಈ ಸಾಧನೆ ಮಾಡಲು ಸಾದ್ಯವಾಯಿತು ಎಂದು ರಜತ್ ಆರ್ ಪಾಂಡುರಂಗಿ ತಿಳಿಸಿರುತ್ತಾರೆ.ಇವರ ಸಾಧನೆಯನ್ನು ಅಭಿನಂದಿಸಿದ ದಿಕ್ಷಾದ ಸಂಸ್ಥಾಪಕರಾದ ಡಾ.ಶ್ರೀಧರ್ ಜಿ. 2021 ನೀಟ್ ಪರೀಕ್ಷೆಯಲ್ಲಿ ರಜತ್ ಆರ್ ಪಾಂಡುರಂಗಿ ದೀಕ್ಷಾದ ಮಾರ್ಗದರ್ಶನವನ್ನು ಚೆನ್ನಾಗಿ ಅಳವಡಿಸಿಕೊಂಡು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ ಎಂದು ತಿಳಿಸಿರುತ್ತಾರೆ.ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಪದವಿಪೂರ್ವ), ಅಥವಾ ನೀಟ್ (ಯುಜಿ) ಭಾರತ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಪದವಿ ಪೂರ್ವ ವೈದ್ಯಕೀಯ (MBBS) ದಂತ ವೈದ್ಯಕೀಯ (BDS) ಮತ್ತು ಆಯುಷ್ ಕೋಸ್೯ಗಳನ್ನು ಪಡೆಯಲು ಬುಸುವ ವಿದ್ಯಾರ್ಥಿಗಳಿಗೆ ಅಲ್ಲದೇ ವಿದೇಶದಲ್ಲಿ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪಡೆಯಲು ಉದ್ದೇಶಿಸಿರುವ ವಿದ್ಯಾರ್ಥಿಗಳಿಗೆ ಅಖಿಲ ಭಾರತ ಪೂರ್ವ ವೈಧ್ಯಕೀಯ ಪ್ರವೇಶ ಪರೀಕ್ಷೆಯಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಪರೀಕ್ಷೆಯನ್ನು ನಡೆಸುತ್ತದೆ. ಇದು ಸೀಟು ಹಂಚಿಕೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿನ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯಕ್ಕೆ ಮತ್ತು ರಾಜ್ಯ ಕೌನ್ಸಲಿಂಗ್ ಪ್ರಾಧಿಕಾರಕ್ಕೆ ಫಲಿತಾಂಶ ವನ್ನು ಒದಗಿಸುತ್ತದೆ. ಸಾವಿರಾರು ವಿದ್ಯಾರ್ಥಿಗಳು ದೀಕ್ಷಾದ ಮಾರ್ಗದರ್ಶನ ಪಡೆದು ಉತ್ತಮ ಸ್ಥಾನ ಗಳಿಸಿದ್ದಾರೆ ಎಂದು  ಡಾ.ಶ್ರೀಧರ್ ಜಿ. ಯವರು ತಿಳಿಸುತ್ತ ದೀಕ್ಷಾದ ಬಗ್ಗೆ ಹೆಚ್ಚಿನ ಮಾಹಿತಿ ಬಯಸುವವರು ಅಂತರ್ಜಾಲ ಪ್ರವೇಶಿಸಿ www.deekshalearning.com ನಲ್ಲಿ ಪರಿಶೀಲಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…