ಶಿವಮೊಗ್ಗ ನ್ಯೂಸ್…
10/11/21 ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಟಿಪಾರ್ಕ್ ವೃತ್ತದಲ್ಲಿ ನವೆಂಬರ್ ಒಂದರಂದು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪುನೀತ್ ರಾಜಕುಮಾರ್ ರವರ ಅಗಲಿಕೆಯಿಂದ ರದ್ದು ಗೋಳಿಸಲಾಗಿದ್ದು, ಇಂದು ಕನ್ನಡದ ಅಭಿಮಾನಿಗಳು ದುಃಖದಿಂದಲೇ ಕನ್ನಡದ ಕಣ್ಮಣಿ, ಯುವರತ್ನ, ಶ್ರೀ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತ ಮೌನ ಆಚರಿಸಿದರು. ನಂತರ ಶಿವಮೊಗ್ಗ ನಗರದ ಬೀದಿ ಬದಿ ವ್ಯಾಪಾರಸ್ಥರು ಕನ್ನಡ ಚಳುವಳಿದಾರ ಧ್ವಜಾಸ್ತಂಬದಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಾಡಲಾಯಿತು.
ಈ ಸಮಯದಲ್ಲಿ ಮಾತಾನಾಡಿದ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಸ್ವಚ್ಛತಾ ಸಪ್ತಾಹ ಆಂದೋಲನದ ನಂತರ ದಿನಗಳಲ್ಲಿ ಎಲ್ಲರೂ ಎಲ್ಲೆಂದರಲ್ಲಿ ಕಸವ ಎಸೆಯದೆ ಒಂದೇ ಬದಿ ಕಸವನ್ನು ಸಂಗ್ರಹಿಸಿ ಹಿಟ್ಟು ಘಂಟೆ ಗಾಡಿಗೆ ನೀಡುವುದು ಸಾಮಾನ್ಯವಾಗಿದೆ. ಘಂಟೆ ಗಾಡಿಯು ಒಂದು ವಾರವೂ ಬರದಿದ್ದಲ್ಲಿ ಅದರಿಂದ ವಾಸನೆ ಕುಡಿದರು ಸಹ ರಾತ್ರಿಯ ವೇಳೆ
ಕಸವನ್ನು ಬೇರೆ ಕಡೆ ಅಕದೆ ಒಂದೇ ಕಡೆ ಇಟ್ಟಿರುವಿರಿ. ಇನ್ನೂ ಮುಂದೆ ಹಸಿ ಕಸ, ಒಣ ಕಸವನ್ನು, ಘಂಟೆ ಗಾಡಿಗೆ ನೀಡದೆ ನಾವುಗಳೇ ಹಸಿ ಕಸದಿಂದ ಗೊಬ್ಬರವನ್ನು ಮಾಡಲು ಮುಂದಾಗಬೇಕು.
ಹಳ್ಳಿಗಳಲ್ಲಿ ಅಡಿಕೆ ತೋಟ, ತೆಂಗಿನ ತೋಟಕ್ಕೆ ಕೊಟ್ಟಿಗೆ ಗೊಬ್ಬರ ಸಿಗುತ್ತಿಲ್ಲ, ನಿವೇ ನಿಮ್ಮಲ್ಲಿ ಸಂಗ್ರಹವಾಗುವ ಹಸಿ ಕಸದಿಂದ ಗೊಬ್ಬರ ಮಾಡಿ ಕೊಟ್ಟರೆ ರೈತರು ಹಣಕೊಟ್ಟು ಪಡೆಯುವರು. ಹಾಗೆ ಒಣ ಕಸಗಳಾದ ಪ್ಲಾಸ್ಟಿಕ್ ಕವರ್, ಬಾಟಲಿಗಳು ಸಂಗ್ರಹಿಸಿ ಚೆಲ್ಲದೆ ಗುಜರಿಗೆ ನೀಡಿದರೆ ಹಣ ಬರುವುದು, ಅವರು ಇದರಿಂದ ಪುನಃ ಪ್ಲಾಸ್ಟಿಕ್ ಸಾಮಗ್ರಿಗಳನ್ನು ತಯಾರಿಸುವರು, ಬಯೋ ಡಿಸೈಲ್ ಮಾಡುವರು, ಡಾಂಬರ್ ರಸ್ತೆಗೆ ಹಾಕುವರು, ನಿಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಇಟ್ಟಿಕೊಳ್ಳಿ.
ಮಹಾನಗರ ಪಾಲಿಕೆ ನೀಡಿದ ಜಾಗದ ಅಳತೆ ಮಿರದಂತೆ, ಮದ್ಯದಲ್ಲಿ ಮೂರು ಅಡಿ ಅಂತರ ವಿರಲಿ, ವ್ಯಾಪಾರಕ್ಕೆ ಬರುವ ಗ್ರಾಹಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವರು ಅವರಿಗೆ ಒಂದು ಬದಿ ವಾಹನ ನಿಲ್ಲಿಸಲು ಬೋರ್ಡ್ ಇಡಿ, ಟ್ರಾಫಿಕ್ ಜಾಮ್ ಮಾಡಿದೆ, ಟ್ರಾಫಿಕ್ ಪೊಲೀಸರ ನಿಲಮ ಪಾಲನೆ ಮಾಡಿ ಹಾಗೂ ಇತರೆ ಇಲಾಖೆಗಳ ಕಾನೂನು ನಿಯಮಗಳನ್ನು ಪಾಲನೆ ಮಾಡಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷರಿಗೆ ಸನ್ಮಾನ್ಯ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ರಾಮಣ್ಣ, ಬೂತ್ ಅಧ್ಯಕ್ಷರಾದ ಶ್ರೀ ಶೇಖರ್, ಜನಾರ್ಧನ್, ಗೋಪಾಲ್, ರಮೇಶ್,ರವಿ, ಮುರಳಿದರ್, ಉದಯ, ಶ್ರೀನಿವಾಸ, ರಾಜು, ಹಾಗೂ ಬೀದಿ ಬದಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.