ಭದ್ರಾವತಿಯ ಶಾಸಕರಾದ ಸನ್ಮಾನ್ಯ ಶ್ರೀಯುತ ಶ್ರೀ ಬಿ.ಕೆ.ಸಂಗಮೇಶ್ವರ್ ರವರು ಇಂದು ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್ ಪರಿಶೀಲನಾ ಸಭೆಯನ್ನು ಸಿಂಗನಮನೆ, ತಾವರಘಟ್ಟ, ಕಂಬದಾಳ್ ಹೊಸೂರು, ಅರಳೀಕೊಪ್ಪ, ಹಿರಿಯೂರು, ಕಲ್ಲಹಳ್ಳಿ, ಕಾರೇಹಳ್ಳಿ, ಬಾರಂದೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಸಭೆಯನ್ನುದ್ಸೇಶಿಸಿ ಮಾತನಾಡಿದರು
ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗೂ ಆಹಾರದ ಕಿಟ್ ವಿತರಣೆ ಮಾಡುವುದಾಗಿ ತಿಳಿಸುವ ಮುಖೇನ ಅಧಿಕಾರಿಗಳಿಗೆ ಸೂಚಿಸಿದರು, ಇದರೊಂದಿಗೆ ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 1000 ರೂ. ಗಳನ್ನು ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದರು.
ಕೋವಿಡ್ ಮಾರಕ ಖಾಯಿಲೆಯಾಗಿದ್ದು, ಅತ್ಯಂತ ಎಚ್ಚರವಹಿಸಬೇಕಾಗಿದೆ, ಸ್ಯಾನಿಟೈಸರ್, ಮಾಸ್ಕ್ ಬಳಕೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಯಲ್ಲಿ ಅನಗತ್ಯ ಒಡಾಡದೇ ಮನೆಯಲ್ಲಿಯೇ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಬೇಕೆಂದು ತಿಳಿಸಿದರು..
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಯುತ ಸಂತೋಷ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಶ್ರೀ ಅಶೋಕ್, ಇ.ಓ. ರಮೇಶ್, ಗ್ರಾಮಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಹಾಗೂ ಆಶಾಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದು ಮಾನ್ಯ ಶಾಸಕರನ್ನು ಗೌರವಿಸಿ ಸನ್ಮಾನಿಸಿದರು…

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ