ಶಿವಮೊಗ್ಗ ಜೂನ್ 1 2021 . ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದಿನಿಂದ ಕೋವಿಡ ಲಸಿಕಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ .ಸದರಿ ಉಪಯೋಗವನ್ನು ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜನತೆ ಉಪಯೋಗಿಸಿ ಕೊಳ್ಳಬಹುದಾಗಿದೆ.ನಾರಾಯಣ ಹೃದಯಾಲಯದಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ ಮತ್ತು ಪ್ರತಿಯೊಂದು ಡೋಸ್ ಗೆ 680 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.ಇಂದಿನಿಂದ ಕೋವಿನ್ ಆ್ಯಪ್ (covin gov.in) ಮತ್ತು ಆರೋಗ್ಯ ಸೇತು(Aarogya Setu) ಆ್ಯಪ್ ನಲ್ಲಿ ನಿಮ್ಮ ಮತ್ತು ನಿಮ್ಮ ಕುಟುಂಬದವರ ಹೆಸರನ್ನು ನೋಂದಾಯಿಸುವುದರ ಮೂಲಕ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿಯು ತಿಳಿಸಿದೆ.