ಶಿವವೊಗ್ಗ ನ್ಯೂಸ್…
ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ 106 ವರ್ಷಗಳ ಬಳಿಕ ಇದೇ ಮೊದಲ ಬಾರಿ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮಗೆ ಹೆಚ್ಚಿನ ಮತ ನೀಡುವ ಮೂಲಕ ಆಯ್ಕೆ ಮಾಡುವಂತೆ ದಾನ ಚಿಂತಾಮಣಿ ಅತ್ತಿಮಬ್ಬೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿಜಯಪುರದ ಸರಸ್ವತಿ ಚಿಮ್ಮಲಗಿ ಮನವಿ ಮಾಡಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್‌ನ 106 ವರ್ಷ ಇತಿಹಾಸದಲ್ಲಿ 25 ಜನ ಪುರುಷರೇ ಅಧ್ಯಕ್ಷರಾಗಿದ್ದು, ಒಮ್ಮೆಯೂ ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡಿಲ್ಲ. ರಾಜ್ಯ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ. ಪರಿಷತ್ ಸಕ್ರಿಯವಾಗಿ ಮುನ್ನಡೆಸಲು ಸಾಧ್ಯವಾಗುವುದಿಲ್ಲ ಎಂಬಿತ್ಯಾದಿ ನೆಪಗಳನ್ನು ಹೇಳುವ ಮೂಲಕ ಪುರುಷರೇ ಇದುವರೆಗೆ ಅಧ್ಯಕ್ಷರಾಗಿ ಪಾರುಪತ್ಯ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸ್ಪರ್ಧೆಗಾಗಿ ಸ್ಪರ್ಧೆ ಮಾಡುತ್ತಿಲ್ಲ. ಬದಲಾಗಿ ಸಾಹಿತಿಯಾಗಿ, ಕಲಾವಿದೆಯಾಗಿ, ಹೋರಾಗಾರ್ತಿಯಾಗಿ, ಸಾಮಾಜಿಕ ಚಿಂತಕಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. 30 ಸಾಹಿತ್ಯ ಕೃತಿಗಳನ್ನು ರಚಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದ್ದೇನೆ.
36 ವರ್ಷಗಳ ಬೋಧಾನ ಅನುಭವದಲ್ಲಿ ಮುಂದಿನ ಅವಧಿಯಲ್ಲಿ ಪರಿಷತ್‌ನ್ನು ರಚನಾತ್ಮಕವಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತದೆ ಎಂದರು. ಸಾಹಿತ್ಯ ಪರಿಷತ್‌ಗೆ ಬರುವ ಬಹುತೇಕರು ಹಿಂದಿನ ಬಾಗಿಲಿನಿಂದಲೇ ಬರಲು ಯತ್ನಿಸುತ್ತಿದ್ದಾರೆ. ಯಾವುದೋ ಒಂದು ಪಕ್ಷದ ಅಥವಾ ಸಂಘಟನೆಗಳ ಬೆಂಬಲವನ್ನು ಯಾಚಿಸುತ್ತಿದ್ದಾರೆ.ಅಂತಹವರಿಗೆ ಸ್ವಂತಿಗೆ ಇದೆಯೇ ಎಂಬುದರ ಬಗ್ಗೆಯೂ ಯೋಚಿಸಬೇಕಿದೆ ಎಂದು ಹೇಳಿದರು.ಆದ್ಯತೆಗಳು : ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಪರಿಷತ್‌ನ ಎರೆಡು ಗೌರವ ಕಾರ್ಯದರ್ಶಿ ಹುದ್ದೆಗಳಲ್ಲಿ ಕಡ್ಡಾಯವಾಗಿ ಒಂದನ್ನು ಮಹಿಳೆಗೆ ಅವಕಾಶ ಕಲ್ಪಿಸುವುದು. ಸಾಹಿತ್ಯದ ಎಲ್ಲಾ ಹಂತಗಳಲ್ಲಿ ಮಹಿಳೆ ಯರಿಗೆ ಸಮಾನ ಆದ್ಯತೆ ನೀಡುವುದು, ದಲಿತ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜನೆ, ಸಮಗ್ರ ಮಹಿಳಾ ಸಾಹಿತ್ಯ ಚರಿತ್ರೆ ನಿರ್ಮಾಣಕ್ಕೆ ಆದ್ಯತೆ, ಗಡಿನಾಡು ಕನ್ನಡ ಸಾಹಿತ್ಯ ಸ್ಮಮೇಳನ ಆಯೋಜನೆ, ಕನ್ನಡ ಶಾಲೆಗಳ ಅಭಿವೃದ್ಧಿಗೆ ಚಿಂತನೆ, ತಾಲೂಕು ಅಧ್ಯಕ್ಷಕರನ್ನು ಆಯ್ಕೆ ಪ್ರಕ್ರಿಯೆಗೆ ಒಳಪಡಿಸುವುದು.
ವಿವಿಧ ಅಕಾಡೆಮಿಗಳೊಂದಿಗೆ ಪರಿಷತ್ ಸಂಬಂಧ ಬೆಳೆಸುವುದು, ಪರಿಷತ್‌ನ ಕೆಲ ನಿಬಂಧನೆಗಳ ತಿದ್ದುಪಡಿ, ಇಂಗ್ಲಿಷ್ ಮಾಧ್ಯಮ ತಾಂತ್ರಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಕ್ನನಡ ಕಡ್ಡಾಯ ಮಾಡುವುದು, ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಭವನ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದರು.ಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲೆ ಪ್ರೊ.ಭುವನೇಶ್ವರಿ, ಪ್ರೊ. ಕಿರಣ್ ದೇಸಾಯಿ, ಶಾರದಾ, ರಾಮಚಂದ್ರ ಇದ್ದರು.