ಶಿವಮೊಗ್ಗ ನ್ಯೂಸ್…

ಪ್ರಸ್ತುತ ಸೌಹಾರ್ದ ಸಹಕಾರಿ ಅಧಿನಿಯಮಕ್ಕೆ ಅಗತ್ಯ ತಿದ್ದುಪಡಿಗಳು ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಮಂಡನೆಯಾಗಿ ಅಂಗೀಕಾರಗೊಂಡಿದ್ದು, ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ. ಹೆಚ್. ಕೃಷ್ಣಾರೆಡ್ಡಿ ಅಭಿನಂದಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದಂದಿನಿಂದ ಇದುವರೆಗೆ ಹಲವು ಬಾರಿ ಕಾಯ್ದೆಗೆ ತಿದ್ದುಪಡಿಗಳು ಆಗಿವೆ. ಇದರಿಂದಾಗಿ ಸೌಹಾರ್ದ ಸಹಕಾರಿ ಕ್ಷೇತ್ರದ ಮೂಲ ಆಶಯಕ್ಕೆ ಧಕ್ಕೆ ಬರುವ ಹಾಗೆ ತಿದ್ದುಪಡಿಗಳಾಗಿದ್ದವು ಅದನ್ನು ಸರಿಪಡಿಸುವ ಕೆಲಸ ಈ ಸರ್ಕಾರದ ಅವಧಿಯಲ್ಲಾಗಿರುವುದು ಸ್ವಾಗತಾರ್ಹ ಎಂದರು.ಆದಾಯ ತೆರಿಗೆ ತೊಂದರೆ ನಿವಾರಣೆಯಾಗುವಂತೆ ರಾಜ್ಯ ಹಾಗೂ ಕೇಂದ್ರದ ಎಲ್ಲ ಶಾಸನಗಳಲ್ಲಿ ಸೌಹಾರ್ದ ಸಹಕಾರಿಗಳು ಕೂಡ ಸಹಕಾರ ಸಂಘಗಳೆಂದು ಪರಿಗಣಿಸಲು ಸಾಧ್ಯವಾಗುವಂತೆ ತಿದ್ದುಪಡಿಯಾಗಿದ್ದು, ಸೌಹಾರ್ದ ಸಹಕಾರಿ ಕಾಯ್ದೆಯೊಂದಿಗೆ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಅಧಿನಿಯಮ 1959ಕ್ಕೆ ಕೂಡ ಅನೇಕ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು. ಸಹಕಾರ ಕ್ಷೇತ್ರ ಇಷ್ಟೊಂದು ಬೃಹದಾಕಾರವಾಗಿ ಬೆಳೆದಿದ್ದರೂ, ಅನೇಕ ಸಾಧನೆಗಳನ್ನು ಮಾಡಿದಾಗ್ಯೂ ಈ ಕ್ಷೇತ್ರದ ಸಮಸ್ಯೆಗಳಿಗೆ ಸ್ವಂದಿಸಲು ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ಇದುವರೆಗೂ ಇರಲಿಲ್ಲ.

ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಿರುವುದಲ್ಲದೆ ಪ್ರಭಾವಿ ಸಹಕಾರ ಸಚಿವರನ್ನು ನೇಮಕ ಮಾಡಿರುವುದು ಸಹಕಾರ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಎಂದರು. ರಾಜ್ಯದ ಸಹಕಾರ ಕ್ಷೇತ್ರಕ್ಕೆ ಹೊಸ ವೇಗವನ್ನು ನೀಡುವ ಮೂಲಕ ಬದಲಾವಣೆಗೆ ನಾಂದಿ ಹಾಡಿರುವ ಶ್ರೇಯ ಸೌಹಾರ್ದ ಸಹಕಾರಿಗಳದ್ದು. ಇಂತಹ ಸೌಹಾರ್ದ ಸಹಕಾರಿಗಳ ಕಾರ್ಯಚಟುವಟಿಕೆಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತ, ಶಾಸನಬದ್ಧ ಕಾರ್ಯನಿರ್ವಹಣೆ, ತರಬೇತಿ, ಪ್ರಚಾರ, ಶಿಕ್ಷಣ ಚಟುವಟಿಕೆಗಳನ್ನು ಸೌಹಾರ್ದ ಸಹಕಾರ ಕ್ಷೇತ್ರದ ಮಾತೃ ಸಂಸ್ಥೆಯಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಡೆಸುತ್ತಾ ಬಂದಿದೆ ಎಂದರು. ರಾಜ್ಯದಲ್ಲಿ 5300ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. 1300ಕ್ಕೂ ಹೆಚ್ಚು ಇ ಸ್ಟಾಂಪಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ ಬೊಕ್ಕಸಕ್ಕೆ ಪ್ರತಿದಿನ 1.00 ಕೋಟಿಗೂ ಹೆಚ್ಚು ರಾಜಸ್ವವನ್ನು ನೀಡುತ್ತಿದೆ. ಈ ಕ್ಷೇತ್ರದಲ್ಲಿ 50 ಲಕ್ಷಕ್ಕೂ ಹೆಚ್ಚು ಸದಸ್ಯರು ತೊಡಗಿಸಿಕೊಂಡಿದ್ದಾರೆ. 60,000ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ. 750 ಕೋಟಿ ರೂಗಳ ಪಾಲು ಬಂಡವಾಳ, 15000 ಕೋಟಿ ರೂಗಳ ಠೇವಣಿ, 1000 ರೂ ಕೋಟಿಗಳ ನಿಧಿಗಳು, 12000 ರೂ ಕೋಟಿಗಳ ಸಾಲ, 18000 ಕೋಟಿ ರೂಗಳ ದುಡಿಯುವ ಬಂಡವಾಳ, ರೂ 230 ಕೋಟಿ ರೂಗಳ ಲಾಭದ ಹೆಗ್ಗಳಿಕೆ ಈ ಕ್ಷೇತ್ರದ್ದಾಗಿದೆ ಎಂದರು.

ಆದಾಯ ತೆರಿಗೆ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ, ಠೇವಣಿದಾರರ ಹಿತರಕ್ಷಣೆಗಾಗಿ ಟಾಸ್ಕ್ ಫೆÇೀರ್ಸ್ ರಚನೆ, ಶಾಸನ ಬದ್ಧ ಕಾರ್ಯನಿರ್ವಹಣೆ, ನಿರಂತರ ಪರಿವೀಕ್ಷಣೆ ಹಾಗೂ ಅನುಪಾಲನೆಗೆ ಕ್ರಮ, ಸಂಯಕ್ತ ಸಹಕಾರಿ ಕೇಂದ್ರ ಕಚೇರಿ, ಪ್ರಾಂತೀಯ ಕಚೇರಿಗಳಿಗೆ ಕಟ್ಟಡ ಮತ್ತು ಪ್ರತಿ ಜಿಲ್ಲೆಗಳಲ್ಲಿ ಸಂಯುಕ್ತ ಸಹಕಾರಿಯ ಸಂಪರ್ಕ ಕಚೇರಿ ನಿರ್ಮಾಣ, ಸೌಹಾರ್ಧ ಸಹಕಾರಿಗಳಿಂದ ಸಾಮಾಜಿಕ ಕಾರ್ಯ ಇತ್ಯಾದಿಗಳು ಸೌಹಾರ್ಧ ಸಹಕಾರಿ ಕ್ಷೇತ್ರ ಸಕ್ರೀಯವಾಗಿ ತೊಡಗಿಸಿಕೊಂಡಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಎ.ಆರ್.ಪ್ರಸನ್ನಕುಮಾರ್, ಸುರೇಶ್, ಕಿರಣ್, ಎಂ.ಶಂಕರ್, ಶಶಿಕುಮಾರ್, ಟಿ.ಎಸ್.ಬಾಲಕೃಷ್ಣ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…