ಶಿವಮೊಗ್ಗ ನ್ಯೂಸ್…
ಕೇಂದ್ರ ಸರ್ಕಾರದ ಪ್ರತಿಷ್ಠಿತ ಪ್ಲಾಂಟ್ ಜಿನೋಮ್ ಸೇವಿಯರ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಅಮೃತ್ ನೋನಿ ಖ್ಯಾತಿಯ ವ್ಯಾಲ್ಯೂ ಪ್ರಾಡಕ್ಟ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶ್ರೀನಿವಾಸಮೂರ್ತಿ ಅವರಿಗೆ ಶಿವಮೊಗ್ಗದಲ್ಲಿ ನಮ್ಮ ಟಿವಿ ವತಿಯಿಂದ ಸನ್ಮಾನಿಸಲಾಯಿತು.
ಕೇಂದ್ರ ಸರ್ಕಾರದ ಪ್ರಶಸ್ತಿಯು ನಮ್ಮ ಸಂಸ್ಥೆಗೆ ಬಂದಿರುವುದಕ್ಕೆ ತುಂಬಾ ಸಂತೋಷವಿದ್ದು, ಗ್ರಾಹಕರ ಆಶೀರ್ವಾದ ಮತ್ತು ಸಿಬ್ಬಂದಿಗಳ ನಿರಂತರ ಶ್ರಮವೇ ಯಶಸ್ಸಿಗೆ ಕಾರಣವಾಗಿದೆ. 164ಕ್ಕೂ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ವಿಶೇಷವಾದ ನೋನಿ ಹಣ್ಣು ಆರೋಗ್ಯಕ್ಕೆ ಸಹಕಾರಿ ಎಂದು ವ್ಯಾಲ್ಯೂ ಪ್ರಾಡಕ್ಟ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರದಿಂದ ದೇಶದ 25 ಜನರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದೆ. ಅದರಲ್ಲಿ ನಮ್ಮ ಸಂಸ್ಥೆಯು ಒಂದಾಗಿದೆ. ಈಗಾಗಲೇ ನೋನಿ ಹಣ್ಣಿನಿಂದ ಅನೇಕ ಪರಿಣಾಮಕಾರಿ ಉತ್ಪನ್ನಗಳ ಮೂಲಕ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿಯು ಜನರ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಔಷಧಿ ಗುಣವುಳ್ಳ ಸಸ್ಯಗಳನ್ನು ಸಂರಕ್ಷಿಸಿ ಬೆಳೆದವರಿಗೆ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ನೀಡುತ್ತಿದ್ದು, ನ. 11ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 1 ಲಕ್ಷ ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದೆ ಎಂದರು.
ಔಷಧೀಯ ಗುಣ ಹೊಂದಿರುವ ಅಮೃತ್ ನೋನಿ ಉತ್ಪನ್ನಗಳ ಮೂಲಕ ದೇಶಾದ್ಯಂತ ಲಕ್ಷಾಂತರ ಜನರ ಆರೋಗ್ಯ ಸುಧಾರಣೆಗೆ ಕಾರಣವಾಗಿದೆ. ನೋನಿ ಮತ್ತು ಹರ್ಬ್ ಫಾರ್ಮರ್ ಅಸೋಸಿಯೇಷನ್ ಮೂಲಕ ನೋನಿ ಹಣ್ಣನ್ನು ತಾವು ಬೆಳೆದ ಬೇರೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆಸಿ ಅವರ ಬದುಕಿಗೂ ಆಸರೆಯಾಗಿದೆ ಎಂದು ತಿಳಿಸಿದರು.
ನಮ್ಮ ಟಿವಿ ಮುಖ್ಯಸ್ಥರು ಮಾಲೀಕರು ಆದ ಜಗದೀಶ್, ನಿರೂಪಕ ಜಿ.ವಿಜಯ್‌ಕುಮಾರ್, ಶ್ರೀಕಾಂತ್, ರಾಣಿ ಬಾಳೆಕೊಪ್ಪ, ರಮ್ಯಾ, ಮಲ್ಲಿಕಾರ್ಜುನ್, ಶಶಿಕಾಂತ್ ನಾಡಿಗ್ ಉಪಸ್ಥಿತರಿದ್ದರು.