ರಾಮಮಂದಿರ ನಿರ್ಮಾಣ ಕಾರ್ಯ ಯಾವುದೆ ಅಡೆತಡೆ ಇಲ್ಲದೆ ಸಾಗಿದೆ. ದೇವಾಲಯದ ಅಡಿಪಾಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಅಕ್ಟೋಬರ್ ವೇಳೆಗೆ ಅಂತ್ಯವಾಗಲಿದೆ ಎಂದು ಶ್ರಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಸೋಶಿಯಲ್ ಮೀಡಿಯಾ ಮೂಲಕ ವಿಚಾರ ಹಂಚಿಕೊಂಡಿರುವ ಟ್ರಸ್ಟ್ ಇಲ್ಲಿ ಕೆಲಸ ಮಾಡುತ್ತಿರುವರೆಲ್ಲರೂ ಸುರಕ್ಷಿತವಾಗಿದ್ದಾರೆ. ಕೊರೋನಾ ಎಚ್ಚರಿಕೆ ನಿಯಮ ಪಾಲನೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ವರದಿ ಮಹೇಶ್ ಗೌಡ ಬೆಂಗಳೂರು