ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ದೊಡ್ಡ ದೊಡ್ಡ ಜ್ಞಾನಿಗಳು ಹುಟ್ಟಿಕೊಂಡಿರುವುದೇ ಗ್ರಂಥಾಲಯದಿಂದ ಎಂದು ಡಿಡಿಪಿಐ ಎನ್.ಎಂ. ರಮೇಶ್ ಹೇಳಿದ್ದಾರೆ.ಅವರು ಇಂದು ನಗರದ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2021 ರ ಸಮಾರೋಪ ಸಮಾರಂಭ ಹಾಗೂ ವಿವಿದ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಬಹುಮಾನ ವಿತರಣೆ ಹಾಗೂ ಉತ್ತಮ ಓದುಗರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದೇಶವನ್ನು ಸುತ್ತು ಇಲ್ಲ ಕೋಶ ಓದು ಎಂದು ಹಿರಿಯರು ಹೇಳಿದ್ದಾರೆ. ಈಗ ಪ್ರತಿ ವಿದ್ಯಾರ್ಥಿಗೂ ಕುಳಿತಲ್ಲೇ ತಿಳಿಯುವ ಅವಕಾಶವಿದೆ. ಪಾಠದ ಜೊತೆಗೆ ಜ್ಞಾನ ಮೇಲ್ದರ್ಜೇಗೇರಿಸಲು ಓದುವುದು ಅನಿವಾರ್ಯ ಎಂದರು.ಕಲಿಕೆ ಎನ್ನುವುದು ಬೇರೆ ಬೇರೆ ಆಯಾಮಗಳಿಂದ ಆಗುತ್ತದೆ., ಇತ್ತೀಚೆಗೆ ಕೇಳುವುದಕ್ಕಿಂತ ನೋಡುವುದೇ ಜಾಸ್ತಿಯಾಗಿದೆ. ನಗರ ಕೇಂದ್ರ ಗ್ರಂಥಾಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಡಿಜಿಟಲೈಸೇಷನ್ ಮಾಡಲಾಗಿದೆ. 50 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಎಲ್.ಕೆ.ಜಿ.ಯಿಂದ ಸ್ಪರ್ಧಾತ್ಮ ಪರೀಕ್ಷೆಗಳವರೆಗೆ ಬೇಕಾಗುವ ಜ್ಞಾನ ಮತ್ತು ಮಾಹಿತಿ ಗ್ರಂಥಾಲಯದಿಂದ ಸಿಗುತ್ತದೆ ಎಂದರು.

ಸಾಹಿತ್ಯ, ವಿಜ್ಞಾನ, ಕಲೆ, ಕಂಪ್ಯೂಟರ್ ಜ್ಞಾನ ಸೇರಿದಂತೆ ಎಲ್ಲಾ ಜ್ಞಾನವು ಗ್ರಂಥಾಲಯದಿಂದ ಲಭ್ಯವಾಗುತ್ತದೆ. ಹೆಚ್ಚು ಜ್ಞಾನ ಸಂಪಾದಿಸಿದರೆ ಉತ್ತಮ ಜೀವನಕ್ಕೆ ಅವಕಾಶ ಸಿಗುತ್ತದೆ. ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಪ್ರತಿ ವ್ಯಕ್ತಿಯ ಬದುಕು ಹಸನಾಗುತ್ತದೆ. ಪ್ರತಿಯೊಂದು ಮನೆಯಲ್ಲಿ ಒಂದು ಪುಟ್ಟ ಲೈಬ್ರರಿ ಇರಬೇಕು. ಓದು ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲರಾದ ಬಿ.ಆರ್. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ತಮಿಳು ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಜಕಣಾಚಾರಿ, ಎಸ್. ಕುಮಾರ್, ರಾಧಾ ರಾಮಚಂದ್ರ, ಹಾಗೂ ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಆರ್. ರಮೇಶ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…