ರಚ್ಚೆ ಹಿಡಿದಿದೆ ಮಳೆ
ಬಿಡದೆ ಸುರಿಯುತ್ತಿದೆ
ಅನಾವೃಷ್ಟಿ ಹೋಗಿಸಲೋ
ಕರೊನಾದ ಕರಾಳತೆಯ
ಮರೆಸಲೋ…
ಯಾವ… ಸಂಭ್ರಮಕ್ಕೊ
ಯಾವ ಕರಾಳತೆಗೋ
ರಚ್ಚೆ ಹಿಡಿದಿದೆ ಮಳೆ

ಸತ್ತವರ ಕಳೇಬರವ
ಕೊಚ್ಚಿಕೊಂಡು ಹೋಗಲೆಂದೋ
ಅತ್ತವರ ಕಣ್ಣೀರು ಮತ್ತೊಬ್ಬರಿಗೆ
ಕಾಣದಿರಲೆಂದೋ…
ಯಾವ… ಸಂತಸಕ್ಕೋ
ಯಾವ…ದುಃಖಕ್ಕೋ
ರಚ್ಚೆ ಹಿಡಿದಿದೆ ಮಳೆ

ಪ್ರಕೃತಿಯ ಮಾರಣಹೋಮವು
ನಿತ್ಯ ನಡೆಯುತ್ತಿದೆ
ಮಣ್ಣನ್ನು ಸಹಜತೆಗೆ ಬಿಡದೇ
ಎಲ್ಲೆಲ್ಲೂ ಕಾಂಕ್ರೀಟ್ ಆವರಿಕೆ
ಮಳೆನೀರು ಹಿಂಗಲು ಬಿಡದೆ
ರಸ್ತೆಯಲ್ಲಿ ಸೃಷ್ಟಿ ಯಾಗಿದೆ ಜಲಸಾಗರ

ಯಾವ…ಸಂಭ್ರಮಕ್ಕೋ
ಯಾರ…ಅಗಲಿಕೆಯ ದುಃಖಕ್ಕೋ
ಯಾವ..ಕರಾಳತೆಗೋ
ರಚ್ಚೆ ಹಿಡಿದಿದೆ ಮಳೆ
ಪರಿಸರ ಸಮತೋಲನವ ಕಾಯ್ದು
ಕೊಳ್ಳುತ್ತಿದೆ ಎಂದು…
ನೆನಪಿಸಲೆಂದು..
ರಚ್ಚೆ ಹಿಡಿದಿದೆ ಮಳೆ.

*ಅನಿತಕೃಷ್ಣ* ಶಿಕ್ಷಕಿ.ತೀರ್ಥಹಳ್ಳಿ. ಶಿವಮೊಗ್ಗ ಜಿಲ್ಲೆ.