ಶಿವಮೊಗ್ಗ ನ್ಯೂಸ್…

ದಾಸಸಾಹಿತ್ಯಕ್ಕೆ ಅಪಾರಕೊಡುಗೆ ನೀಡಿದ ಸಂತಕವಿ ವಿಶ್ವಮಾನವ ಕನಕದಾಸರ ತತ್ವ ಆದರ್ಶಗುಣಗಳು ಎಂದೆAದಿಗೂ ಅಜರಾಮರ ಎಂದು ರೋಟರಿ ಎಜುಕೇಶನಲ್ ಛಾರಿಟಬಲ್ ಟ್ರಸ್ಟ್ನ ಟ್ರಸ್ಟಿ ಹಾಗೂ ಮಾಜಿ ಅಧ್ಯಕ್ಷರಾದ ಜಿ.ವಿಜಯಕುಮಾರ್ ನುಡಿದರು.

ಅವರು ಇಂದು ಬೆಳಿಗ್ಗೆ ನಗರದ ರೋಟರಿ ವಿದ್ಯಾಸಂಸ್ಥೆಯಲ್ಲಿ ಇಂರ‍್ಯಾಕ್ಟ್ ಕ್ಲಬ್ ಹಾಗೂ ಟ್ರಸ್ಟೀವತಿಯಿಂದ ಹಮ್ಮಿಕೊಳ್ಳಲಾದ ಕನಕದಾರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು, ಕನಕದಾಸರು ತಮ್ಮ ಅದ್ವುತ ಕೀರ್ತನೆಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವುದರ ಮುಖಾಂತರ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಜಾತಿನಿಂದನೆಯನ್ನು ಪ್ರಬಲವಾಗಿ ವಿರೋಧಿಸಿ, ಅವರ ಕೀರ್ತನೆಗಳು ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತೇವೆ ತಮ್ಮ ಕೀರ್ತನೆಗಳ ಮೂಲಕ ಅದ್ಯಾತ್ಮಿಕ, ಸಮಾಜಿಕ ಹಾಗೂ ವೈಚಾರಿಕತೆಯ ಪ್ರಜ್ಷೆ ಬಿತ್ತಿದ್ದಾರೆ.

ಕನಕದಾಸರು ದಾಸಪಂತದ ವಚನಕಾರರು ಮಾತ್ರವಲ್ಲ ಎಲ್ಲ ಮತಿಯ ಬಂದನಗಳಿAದ ಪಾರಾಗಿ ಸಾಮಾಜಿಕ ಕಟ್ಟುನಿಟ್ಟುಗಳಿಂದ ಮುಕ್ತರಾಗಿ ಆದ್ಯಾತ್ಮ ಸಿದ್ಧಿಯಶಿಖರವನ್ನೇರಿದ ಬಂದು.
ಕಾರ್ಯಕ್ರಮದಲ್ಲಿ ಶಿಕ್ಷಕಿ ನಾಗರತ್ನರವರು, ಕನಕದಾಸರ ಜೀವನ ಚಿರಿತ್ರ ಅವರ ಸಾಧನೆಯ ಬಗ್ಗೆ ಸವಿಪ್ತರವಾಗಿ ಮಾಹಿತಿ ನೀಡಿದರು.
ಸಮಾರಂಬದಲ್ಲಿ ಪ್ರಾಂಶುಪಾಲರಾದ ಸೂರ್ಯನಾರಾಯಣ ಮುಖ್ಯ ಶಿಕ್ಷಕಿ ಜಯಶೀಲಬಾಯಿ ಇಂರ‍್ಯಾಕ್ಟ್ಕ್ಲಬ್ ಅಧ್ಯಕ್ಷ ರಾಹುಲ್ ಕಾರ್ಯದರ್ಶಿ ಹರ್ಶಿತ್ ಹಾಗೂ ಶಿಕ್ಷಕರು, ಸಿಬ್ಬಂದಿವರ್ಗದವರ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಕನಕದಾರ ಕೀರ್ತನೆಗಳನ್ನು ಹಾಡಿ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…