ಶಿವಮೊಗ್ಗ ನ್ಯೂಸ್…

ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಶ್ರೇಷ್ಠ ತತ್ವಜ್ಞಾನಿ ಅಲ್ಲಮ ಪ್ರಭು ದೇವರ ಹೆಸರನ್ನು ಶರಣೆ ಅಕ್ಕಮಹಾದೇವಿ ಅವರ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಇಂದು ರಾಷ್ಟ್ರೀಯ ಬಸವದಳ ವತಿಯಿಂದ ಇಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. ಶಿವಮೊಗ್ಗದ ಶ್ರೇಷ್ಠ ಮಟ್ಟದ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯ.

ಜಿಲ್ಲೆಯ ಜನತೆ ಬಹುದಿನಗಳ ಕನಸಾಗಿದ್ದ ವಿಮಾನ ನಿಲ್ದಾಣ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಪ್ರಯತ್ನದಿಂದ ಅನುಷ್ಠಾನಗೊಳ್ಳುತ್ತಿದ್ದು, ಕಾಮಗಾರಿ ಮುಕ್ತಾಯ ಹಂತಕ್ಕೆ ಬರುತ್ತಿದೆ. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ಜಿಜ್ಞಾಸೆ ನಡೆದಿದೆ ಎಂದು ತಿಳಿಸಿದರು.ಶಿವಮೊಗ್ಗ ಜಿಲ್ಲೆ ಬಸವಾದಿ ಶರಣರ ಪರಂಪರೆಯ ತವರಾಗಿದೆ. ಪ್ರಜಾಪ್ರಭುತ್ವ ತತ್ವ ಸಿದ್ದಾಂತಗಳಿಗೆ ಶರಣರ ತತ್ವಗಳು ಮುನ್ನುಡಿ ಎಂದು ಪರಿಭಾವಿಸಲಾಗಿದೆ. ಸರ್ವರಿಗೂ ಸರ್ವಕಾಲಕ್ಕೂ ಆದರ್ಶದ ಸತ್ಪತ ತೋರಿರುವ ಹಾಗೂ ವಿಶ್ವದ ಸ್ತ್ರೀ ಸಮೂಹದ ಸಾಧನೆಯ ಕಾರ್ಯಕ್ಕೆ ದಿಕ್ಸೂಚಿಯಂತಿರುವ ಅಕ್ಕಮಹಾದೇವಿ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಅತ್ಯಂತ ಸೂಕ್ತ ಎನಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ಕನ್ನಡ ಕಾಡು ಕಂಡ ಪರಮಶ್ರೇಷ್ಟ ತತ್ವ ಜ್ಞಾನಿಗಳಾದ ಅಲ್ಲಮಪ್ರಭು ದೇವರು ಅಥವಾ ಶ್ರೇಷ್ಠ ಅನುಭಾವಿ ಅವರ ಹೆಸರನ್ನು ಇಡುವುದರ ಮೂಲಕ ನಾಡಿನ ಅಸ್ಮಿತೆಯನ್ನು ವಿಶ್ವಕ್ಕೆ ಪರಿಚಯಿಸಿದಂತಾಗುತ್ತದೆ.

ಆದ್ದರಿಂದ ಇಬ್ಬರಲ್ಲಿ ಒಬ್ಬರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಬೇಕೆಂದು ಮನವಿಯಲ್ಲಿ ಒತ್ತಾಯಿಸಾಗಿದೆ.ಈ ಸಂದರ್ಭದಲ್ಲಿ ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ. ಮಾತೆ ಗಂಗಾದೇವಿ, ಸೇರಿದಂತೆ ಹಲವರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…