ಶಿವಮೊಗ್ಗ ನ್ಯೂಸ್…

75 ನೇ ಸ್ವಾತಂತ್ರೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ದೇಶ ಹಾಗೂ ಭಾಷೆ ಕುರಿತ ಸಂಗೀತ ನೃತ್ಯ ವೈಭವ `ಜಯ ಭಾರತ ಜನನಿಯ ತನುಜಾತೆ’ ಎಂಬ ವಿಶೇಷ ಕಾರ್ಯಕ್ರಮವನ್ನು ನ.26 ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 5ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಾಮಗಾನ ಸಂಸ್ಥೆಯ ಗೌರವಾಧ್ಯಕ್ಷ ಕೆ.ಈ.ಕಾಂತೇಶ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಗಾಮ ಸಂಸ್ಥೆಯು ಕಳೆದ 3ವರ್ಷಗಳಿಂದ ನಗರದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಮಹಿಳಾ ಭಜನಾ ತಂಡಗಳಿಗಾಗಿ ಸಾಮೂಹಿಕ ದೇಶ ಭಕ್ತಿಗೀತೆಯ ಭಾರತೀಯ ನಮನ ಎಂಬ ದೇಶಭಕ್ತಿಗೀತೆ ಸ್ಪರ್ಧೆಯನ್ನು ಅ.30ರಂದು ಆಯೋಜಿಸಲಾಗಿತ್ತು. ಸುಮಾರು 23ಕ್ಕೂ ಹೆಚ್ಚು ತಂಡಗಳು ಇದರಲ್ಲಿ ಭಾಗವಹಿಸಿದ್ದವು. ಈ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಕೂಡ ಜಯ ಭಾರತ ಜನನಿಯ ತನುಜಾತೆ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದರು.

ಜಯ ಭಾರತ ಜನನಿಯ ತನುಜಾತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನ್ನಡ ಕೋಗಿಲೆಯ ಖ್ಯಾತಿಯ ಪಾರ್ಥ, ಚಿರಂತನ್, ಮನೋಜವಂ ಆತ್ರೇಯ, ಸರಿಗಮ ಖ್ಯಾತಿಯ ಪೃಥ್ವಿ ಭಟ್ ಮತ್ತು ಸ್ಥಳೀಯ ಪ್ರತಿಭೆಗಳಾದ ಪೃಥ್ವಿ ಗೌಡ, ಧನ್ಯ ಶ್ರೀ ಮುಂತಾದವರು ದೇಶಭಕ್ತಿ ಗೀತೆಗಳ ಚಲನಚಿತ್ರಗೀತೆಗಳನ್ನು ಹಾಡಲಿದ್ದಾರೆ. ಪ್ರಮುಖ ಆಕರ್ಷಣೆಯಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಭಜನಾ ತಂಡದ ಸದಸ್ಯರು ಸೇರಿ ಸಾಮೂಹಿಕ ದೇಶಭಕ್ತಿ ಗೀತೆ ಹಾಡಲಿದ್ದಾರೆ. ಇದರ ಜೊತೆಗೆ ಸಹ ಚೇತನ ನೃತ್ಯಾಲಯದ ವಿದ್ಯಾರ್ಥಿಗಳು ನೃತ್ಯ ವೈವಿದ್ಯವನ್ನು ಪ್ರದರ್ಶಿಸಲಿದ್ದಾರೆ ಎಂದರು.ಸಂಸ್ಥೆಯ ಕಾರ್ಯದರ್ಶಿ ವಿನಯ್ ಮಾತನಾಡಿ, ನ.26ರ ಸಂಜೆ ನಡೆಯುವ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಆ.ಪ.ರಾಮಭಟ್ಟ, ಸಾಮಗಾಮ ಸಂಸ್ಥೆಯ ಗೌರವಾಧ್ಯಕ್ಷ ಕೆ.ಈ.ಕಾಂತೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರಸನ್ನಮಹಿಷಿ, ಚೇತನ್, ರಾಹುಲ್ ಬಿದಿರೆ, ವಿಶ್ವಾಸ್, ಪವನ್, ಅಭಿ ಮುಂತಾದವರು ಇದ್ದರು.ಬಾಕ್ಸ್: ಕುಟುಂಬ ರಾಜಕಾರಣ ಬೇಡ: ವಿಧಾನ ಪರಿಷತ್ ಚುನಾವಣೆಯಲ್ಲಿ ನೀವು ಸ್ಪರ್ಧಿಸಬಹುದಿತ್ತಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಾಂತೇಶ್, ಇಲ್ಲ. ತಂದೆಯವರಿಗೆ ಕುಟುಂಬ ರಾಜಕಾರಣ ಬೇಡ ಎಂಬ ಅಭಿಪ್ರಾಯ ಹೊಂದಿದ್ದಾರೆ. ಅವರ ಮಾತಿನಂತೆ ಮತ್ತು ಪಕ್ಷದ ಹಿರಿಯರ ಮಾತಿನಂತೆ ತಾವು ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಿಂದ ದೂರ ಉಳಿದಿದ್ದೇನೆ. ಕಳೆದ ಬಾರಿ ರಾಣೆಬೆನ್ನೂರು ಕ್ಷೇತ್ರಕ್ಕೂ ಕೂಡ ತಮ್ಮ ಹೆಸರು ಕೇಳಿ ಬಂದಿದ್ದು ನಿಜ. ಚುನಾವಣೆಗಳು ಬಂದಾಗಲೆಲ್ಲ ಈ ರೀತಿಯ ಮಾತುಗಳು ಕೇಳಿ ಬರುತ್ತವೆ. ಆದರೆ, ಪಕ್ಷದ ತೀರ್ಮಾನವೇ ಅಂತಿಮವಾಗಿರುತ್ತದೆ. ಅದಕ್ಕೂ ಮೊದಲು ತಂದೆಯವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…