ಶಿವಮೊಗ್ಗ ನ್ಯೂಸ್…
ಶಿವಮೊಗ್ಗದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಇಂದು ದೈವಜ್ಞ ಸಹಕಾರ ಸದನದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕರ್ಕಿಯ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಹಕಾರ ಸಂಘದ ಅಧ್ಯಕ್ಷ ಬಿ.ಎನ್. ಬಿಳಕಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಮುರಳೀಧರ ವಿ. ಶೇಟ್, ಖಜಾಂಚಿ ಚಂದ್ರಹಾಸ ಪಿ. ರಾಯ್ಕರ್, ನಿರ್ದೇಶಕರಾದ ಕಮಲಾಕ್ಷ, ಪಾಂಡುರಂಗ ಶೇಟ್, ಗುರುರಾಜ್, ವಿಜಯೇಂದ್ರ ಜಿ. ವರ್ಣೀಕರ್, ಜಗದೀಶ್ ಚಂದ್ರ, ನಾಗರಾಜ್ ಜಿ. ಶೇಟ್, ಪ್ರಭಾವತಿ, ಪ್ರತಿಮಾ ಸೇರಿದಂತೆ ಹಲವರಿದ್ದರು.