ಶಿವಮೊಗ್ಗ ನ್ಯೂಸ್…

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆ ನೀತಿಸಂಹಿತೆಯನ್ನು ಉಲ್ಲಂಘಿಸಿ ಅಭ್ಯರ್ಥಿ ಪರ ಪ್ರಚಾರ ಮತ್ತು ಮತಯಾಚನೆ ಮಾಡಿರುವ ಶಿಕ್ಷಕರು ಹಾಗೂ ಸರ್ಕಾರಿ ನೌರರ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಪತ್ರಿಕಾ ಸಂಪಾದಕರು ಇಂದು ಮನವಿ ಸಲ್ಲಿಸಿದರು.

ರಾಜ್ಯಾದ್ಯಾಂತ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸರ್ಕಾರಿ ನೌಕರರಾಗಿದ್ದು, ಸಾಹಿತ್ಯ ಪರಿಷತ್ತಿನ ಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆಗಳು ಜಾರಿಯಲ್ಲಿದ್ದರೂ, ಇವರುಗಳು ನೀತಿ ಸಂಹಿತೆಯ ನಿಯಮ ಉಲ್ಲಂಘಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಡಿ.ಬಿ. ಹಾಗೂ ಶಿವಮೊಗ್ಗ ತಾಲ್ಲೂಕು ಶಿಕ್ಷಕರ ವಾಟ್ಸಾಪ್ ಗ್ರೂಪ್ಗಕಳಿಗೆ ಸಾಹಿತ್ಯ ಪರಿಷತ್ತಿನ ಅಭ್ಯರ್ಥಿಯಾದ ಡಿ.ಬಿ. ಶಂಕರಪ್ಪ ಇವರ ಪರವಾಗಿ ದಿನಾಂಕ 19/11/2021ರ ಶುಕ್ರವಾರ ಸಂಜೆ ‘ಸರ್ಕಾರಿ ನೌಕರರ ಭವನ’ ಶಿವಮೊಗ್ಗ ಇಲ್ಲಿ ಸಭೆ ಏರ್ಪಡಿಸುವ ಬಗ್ಗೆ  ಮೆಸೇಜುಗಳನ್ನು ಹಾಕಿದ್ದು, ಅದರಂತೆ ಇವರು ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ಶಿವಮೊಗ್ಗ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಭೆ ನಡೆಸಿ, ಈ ಸಭೆಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಅಭ್ಯರ್ಥಿಯಾದ ಸ್ಪರ್ಧಿಸಿರುವ ಡಿ.ಬಿ.ಶಂಕರಪ್ಪ ಇವರನ್ನು ಸಭೆಗೆ ಕರೆಸಿ ಮತಯಾಚನೆ ಮಾಡಿದ್ದಾರೆ. ಸಭೆಯ ಪೋಟೋ ಹಾಗೂ ಮೆಸೇಜ್ಗಯಳನ್ನು ಶ್ರೀ ಜಿ.ಎಂ. ದಿನೇಶ್ ಇವರು ವಾಟ್ಸಾಪ್ ಗ್ರೂಪ್ಗತಳಿಗೆ ಹಾಕಿರುತ್ತಾರೆ. ಇದು ಸರ್ಕಾರಿ ನೌಕರರಿಗೆ ವಿರುದ್ಧವಾದ ನಿಯಮವಾಗಿರುತ್ತದೆ. ಈ ಸಭೆಯ ವೇದಿಕೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಬಿ.ರುದ್ರಪ್ಪ, ಸ.ಹಿ.ಕಿ.ಪ್ರಾ. ಶಾಲೆ, ವಿದ್ಯಾನಗರ, ಶಿವಮೊಗ್ಗ, ಉಪಾಧ್ಯಕ್ಷರು ದಿನೇಶ್ ಜಿ.ಎಂ.,ಸಹ ಶಿಕ್ಷಕ, ಸ.ಹಿ.ಪ್ರಾ. ಶಾಲೆ, ಆಯನೂರು ಕೋಟೆ, ಶಿವಮೊಗ್ಗ ತಾ., ಫಾರ್ಮರ್ ಡಿಸ್ಟರ್ಸ್ ಪಿಹೆಚ್ಸಿಶ ಸೆಂಟರ್, ಸಿಗೇಹಟ್ಟಿ, ಶಿಮೊಗ್ಗ. ನೌಕರ ಹಾಗೂ ರಾಜ್ಯ ನೌಕರರ ಸಂಘದ ಶಾಂತರಾಜ್, ಧರ್ಮಪ್ಪ ಸಹ ಶಿಕ್ಷಕರು, ಸ.ಹಿ.ಪ್ರೌ. ಶಾಲೆ, ಪಿಳ್ಳಂಗೆರೆ, ಶಿವಮೊಗ್ಗ ತಾ., ದೈಹಿಕ ಶಿಕ್ಷಕರಾದ ನಿರಂಜನಮೂರ್ತಿ ಸ. ಪ್ರೌ. ಶಾಲೆ ಅಬ್ಬಲಗೆರೆ, ಯೋಗೇಂದ್ರಪ್ಪ ದೈಹಿಕ ಶಿಕ್ಷಕ ಸ.ಪ್ರೌ. ಶಾಲೆ ಗಾಜನೂರು, ಸೇರಿದಂತೆ ಅನೇಕ ಶಿಕ್ಷಕರು ಅಭ್ಯರ್ಥಿ ಪರ ಮತಯಾಚನೆ ಮಾಡಿ ಸರ್ಕಾರದ ಕಾನೂನು ಹಾಗೂ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಇವರುಗಳು ಅಲ್ಲದೆ ಇನ್ನು ಕೆಲವು ಸರ್ಕಾರಿ ನೌಕರರು ಮತ್ತು ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಹಾಗೂ ಪ್ರೌಢ ಶಾಲಾ ಶಿಕ್ಷಕರು ಮತಯಾಚನೆಯ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿದರು. ದಿನಾಂಕ 19/11/2021 ರಂದು ‘ಸರ್ಕಾರಿ ನೌಕರರ ಸಂಘದ ಭವನ’ದಲ್ಲಿ ಇರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು, ಪರಿಶೀಲಿಸಿ ಈ ಸಭೆಗೆ ಹಾಜರಾದ ಸರ್ಕಾರಿ ನೌಕರರ ಹಾಗೂ ಶಿಕ್ಷಕರ ಸಂಘ ಪದಾಧಿಕಾರಿಗಳ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಮನವಿಯಲ್ಲಿ ಆಗ್ರಹಿಸಲಾಗಿದೆ.ಸ್ಥಳೀಯ ಪತ್ರಿಕೆಗಳ ಸಂಪಾದಕರಾದ ಜಿ. ಪದ್ಮನಾಭ, ಎಸ್.ಕೆ. ಗಜೇಂದ್ರಸ್ವಾಮಿ, ಜಿ. ಚಂದ್ರಶೇಖರ್, ಎ. ಭರತೇಶ್, ಸುಧೀರ್ ಕುಮಾರ್, ಹಾಗೂ ಮಾನವ ಹಕ್ಕುಗಳ ಕಮಿಟಿ ಅಧ್ಯಕ್ಷ ಕೆ. ನಾಗರಾಜ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…