ಶಿವಮೊಗ್ಗ ನ್ಯೂಸ್…
24/11/21 ಶಿವಮೊಗ್ಗ ನಗರದ, ಬಿ ಹೆಚ್ ರಸ್ತೆಯ ಚರ್ಚ್ ಹಾಗೂ ಮೀನಾಕ್ಷಿ ಭವನದ ಬೀದಿ ಬದಿ ವ್ಯಾಪಾರಿಗಳನ್ನು ಎಂಟು ದಿನಗಳ ಹಿಂದೆ ಸಾರ್ವಜನಿಕರ ಪುಟ್ ಪಾತ್ ಸಂಪೂರ್ಣ ಆಕ್ರಮಿಸಿಕೊಂಡಿರುವ ದೂರಿನ ಅನ್ವಯ ಪೊಲೀಸ್ ಇಲಾಖೆಯು ಎಲ್ಲಾ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಗೊಳಿಸಲಾಯಿತ್ತು.
ಜಿಲ್ಲಾರಕ್ಷಾಧಿಗಳಾದ ಮಾನ್ಯ ಶ್ರೀ ಬಿ.ಎಂ. ಲಕ್ಷ್ಮೀ ಪ್ರಸಾದ್ ರವರನ್ನು, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಪಾಲಿಕೆಯಿಂದ ಬೀದಿ ಬದಿ ವ್ಯಾಪಾರಸ್ಥರ ಗುರುತಿನ ಚೀಟಿ ಪಡೆದವರಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲು ಮನವಿ ಮಾಡಲಾಯಿತು.
ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳು ಸಾರ್ವಜನಿಕ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪಾಲಿಕೆ ನಿಯಮದಂತೆ ಬೀದಿ ಬದಿ ಗುರುತಿನ ಚೀಟಿ ಪಡೆದ ಫಲಾನುಭವಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಿದ್ದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ನಲ್ಮ್ ವಿಭಾಗದ ಅಧಿಕಾರಿಗಳಾದ ಸಿಎಓ ಶ್ರೀ ಮತಿ ಅನುಪಮಾ ರವರ ತಂಡವು ದಿಢೀರ್ ಬೀದಿ ಬದಿ ವ್ಯಾಪಾರಸ್ಥರ ಪಾಲಿಕೆ ನೀಡಿದ ಗುರುತಿನ ಚೀಟಿ, ಸ್ವಚ್ಛತೆ, ಗ್ರಾಹಕರಿಗೆ ನೀಡುತ್ತಿರುವ ನೀರು, ತಿಂಡಿ ತಿನಿಸುಗಳು ಯಾವುದರಲ್ಲಿ ನೀಡುತ್ತಿರುವ ಬಗ್ಗೆ ಸಮೀಕ್ಷೆ ಮಾಡಿದರು.
ಗಾಡಿಗಳಲ್ಲಿ ಸಂಗ್ರಹವಾಗುವ ಕಸಗಳ ವಿಲೇವಾರಿ ಹೇಗೆ ಮಾಡುತ್ತಿರಿ ಎಂದು ಕೇಳಿದರು. ಕೊರೋನಾ ಎಚ್ಚರಿಕೆಯಿಂದ ಯುಸ್ ಎಂಡ್ ತ್ರೊ ಬಳಸಿ,, ಒಮ್ಮೆ ಬಳಸಿದ ಪ್ಲೆಟ್ ಮತ್ತೆ ಬಳಸಬೇಡಿ, ಸದಾ ಗುರುತಿನ ಚೀಟಿ ತಮ್ಮ ಬಳಿ ಇರಲಿ, ಗುರುತಿನ ಚೀಟಿಯಲ್ಲಿ ಇರುವ ಫಲಾನುಭವಿಗಳೆ ವ್ಯಾಪಾರ ಮಾಡಬೇಕು ಬೇರೆಯವರು ಈ ಸ್ಥಳಗಳಲ್ಲಿ ಇದ್ದರೆ ಕಾರ್ಡ್ ರದ್ದಾಗುವುದು. ಪಾಲಿಕೆಗೆ ಯಾವ ವ್ಯಾಪಾರ ಮಾಡುತ್ತಿವಿ ಎಂದು ತಿಳಿಸಿರುವಿರಿ ಅದೇ ವ್ಯಾಪಾರ ಮಾಡಬೇಕು ಪಾಲಿಕೆ ನೀಡಿದ ಜಾಗದ ಅಳತೆ ಮಿರದಂತೆ ವ್ಯಾಪಾರ ಮಾಡಬೇಕು, ನಿಯಮ ಉಲ್ಲಂಘಿಸಿದರೆ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ನಿಮ್ಮ ವ್ಯಾಪಾರದ ಸಾಮಾಗ್ರಿಗಳನ್ನು ವಶಪಡಿಸಿ ಕೋಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ, ಪಾಲಿಕೆಯ ಡೇ ನಲ್ಮ್ ವಿಭಾಗದ ಸಿಓ ಗಳಾದ ಶ್ರೀ ಲೋಕೇಶಪ್ಪ, ಶ್ರೀಮತಿ ಗೀತಾ, ಶ್ರೀಮತಿ ರೇಣುಕಾ, ಮತ್ತು ಪಾಲಿಕೆ ಅಧಿಕಾರಿಗಳ ತಂಡ, ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.