ಕರ್ನಾಟಕ ಸಂಘದ 91ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಛಾಯಾಗ್ರಾಹಕರಾದ ಆಯನೂರು ಗಿರಿ ಮತ್ತು ಅಡ್ವೋಕೇಟ್ ಶಿವಕುಮಾರ್ ಅವರು ತೆಗೆದು ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಪ್ರದರ್ಶನದ ಉದ್ಘಾಟನೆಯನ್ನು ಸಾಹಿತಿ ಡಾ. ಜಯಪ್ರಕಾಶ ಮಾವಿನಕುಳಿ ಅವರು ಉದ್ಘಾಟಿಸಿ, ಛಾಯಾಗ್ರಾಹಕರು ತಾಳ್ಮೆಯಿಂದ ತೆಗೆದ ಪಕ್ಷಿ, ಕೀಟ ಹಾಗೂ ವನ್ಯಜೀವಿಗಳ ಆಕಸ್ಮಿಕ ಭಂಗಿಗಳ ಛಾಯಾಚಿತ್ರಗಳನ್ನು ವಿಕ್ಷೀಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಎಚ್.ಡಿ.ಉದಯಶಂಕರ ಶಾಸ್ತ್ರಿ, ಗೌರವ ಕಾರ್ಯದರ್ಶಿ ಗಳಾದ ಪ್ರೊ ಆಶಾಲತಾ ಎಂ. ಮೋಹನ್ ಶಾಸ್ತ್ರಿ, ಕೆ. ಮಂಜುಳಾ, ಅಂಬಿಕಾ ದೇವರಾಜ್,ಡಾ. ಹೆಚ್. ಹಾಲಮ್ಮ ಹಾಗೂ ಪತ್ರಿಕಾ ಛಾಯಾಗ್ರಾಹಕರಾದ ಸ್ಪಂದನ ಚಂದ್ರು, ಶಿವಮೊಗ್ಗ ಯೋಗರಾಜ್, ಶಿವಮೊಗ್ಗ ನಂದನ್, ಶಿವಮೊಗ್ಗ ನಾಗರಾಜ್, ಉಪಸ್ಥಿತರಿದ್ದರು.