ಚೈಲ್ಡ್ ಲೈನ್ 1098…
ಮೇಲ್ಕಾಣಿಸಿದ ನಂಬರ್ ಚೈಲ್ಡ್ ಲೈನ್ ನಂಬರ್ . ಮಕ್ಕಳ ಸಹಾಯವಾಣಿ . ಯಾವುದೇ ಮಗು ಕೂಡ ಅಸಹಾಯಕರಾಗಿದ್ದಾರೆ ಅಥವಾ ತೊಂದರೆಯಲ್ಲಿದ್ದಾಗ ಈ ಸಹಾಯವಾಣಿಗೆ ಕರೆ ಮಾಡಿದಲ್ಲಿ ಆ ಮಗುವಿಗೆ ಅಗತ್ಯ ಸಹಾಯವನ್ನು ಮಾಡುತ್ತದೆ. ಈಗ ಮೂಡುವ ಪ್ರಶ್ನೆ ಏನೆಂದರೆ ಈ ಸಹಾಯವಾಣಿಗೆ ನಮ್ಮಲ್ಲಿ ಎಷ್ಟು ಜನ ಕರೆ ಮಾಡಿದ್ದೇವೆ ? ಕರೆ ಮಾಡಿದವರಿದ್ದರೆ ಅವರು ನಿಜವಾಗಲೂ ಭಾರತದ ತನ್ನ ಕರ್ತವ್ಯಗಳನ್ನು ತಿಳಿದಿರುವ ನಾಗರಿಕರು. ಕರೆ ಮಾಡಿಲ್ಲದವರಿಗೆ 1ಪ್ರಶ್ನೆ ಇದುವರೆಗೆ ನಿಮ್ಮ ಜೀವನದಲ್ಲಿ ಎಂದೂ ಕೂಡ ಯಾವುದೇ ಮಗು ಸಹಾಯಕ್ಕಾಗಿ ನಿರೀಕ್ಷಿಸುತ್ತಿರುವುದು ನಿಮ್ಮ ಗಮನಕ್ಕೆ ಬರಲಿಲ್ಲವೇ ? ಅಥವಾ ಹಾಗೇನಾದರೂ ಮಾಡಿದಲ್ಲಿ ನಿಮಗೆ ತೊಂದರೆಯಾಗುವುದೆಂಬ ಭಯವೇ ?

ನಾವು ಅನೇಕ ಕಡೆಗಳಲ್ಲಿ ದೇವಸ್ಥಾನಗಳಲ್ಲಿ ಸಿಗ್ನಲ್ ಗಳಲ್ಲಿ ಮಕ್ಕಳು ಭಿಕ್ಷೆ ಬೇಡುವುದನ್ನು ನೋಡಿರುತ್ತೇವೆ ಅಂಥ ಸಮಯದಲ್ಲಿ ನಮ್ಮ 1ಕೆರೆ ಅವರ ಭವಿಷ್ಯವನ್ನೇ ಬದಲಾಯಿಸಬಹುದು. ಭಾರತದ ಜವಾಬ್ದಾರಿಯುತ ನಾಗರಿಕರಾಗಿ ಇದು ನಮ್ಮೆಲ್ಲರ ಕರ್ತವ್ಯ ಕೂಡ ಹೌದು. ಮುಂಬೈ ನಗರದಲ್ಲಿ ಪ್ರಜ್ಞಾವಂತ ನಾಗರಿಕರ ವೇದಿಕೆಯೊಂದು ಅಭೂತಪೂರ್ವ ಕೆಲಸ ಮಾಡುತ್ತಿದ್ದು ಮಕ್ಕಳಿಗೆ ಶಿಕ್ಷೆ ನೀಡುವುದನ್ನು ಪ್ರತಿಭಟಿಸಿ ಸಹಾಯವಾಣಿಗೆ ಕರೆ ಮಾಡಲು ಕೋರಿಕೊಳ್ಳುತ್ತಿದ್ದಾರೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾ ನಗರಿಯಲ್ಲಿ ನಡೆದ ಘಟನೆಯೊಂದು ಎಲ್ಲರ ಕಣ್ಣು ತೆರೆಸುವಂಥದ್ದು. ಮೇ ತಿಂಗಳಿನಲ್ಲಿ 4 ಮಕ್ಕಳು ರೈಲ್ವೆಯಲ್ಲಿ ಪ್ರಯಾಣಕ್ಕೆ ಮುಂದಾಗಿದ್ದರು.

ಒಬ್ಬ ಸಹಪ್ರಯಾಣಿಕ ತಕ್ಷಣವೇ ಕರೆ ಮಾಡಿ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಅಧಿಕಾರಿಗಳು 4ಮಕ್ಕಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಜತೆಗಿದ್ದ ಆರೋಪಿ ಯನ್ನು ಬಂಧಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ರೈಲ್ವೆಯಲ್ಲಿ ಮಕ್ಕಳ ವಯಸ್ಸನ್ನು ಹದಿನೆಂಟು ಎಂದು ಹೇಳಿ ಟಿಕೆಟ್ಟನ್ನು ಕಾಯ್ದಿರಿಸಲಾಗಿತ್ತು. ಯುನಿಸೆಫ್ ನ ಸಹಯೋಗದೊಂದಿಗೆ ಈ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅವರ ಶಿಷ್ಯ ಮಾಡಲಾಯ್ತು . ತನಿಖೆಯಿಂದ ತಿಳಿದುಬಂದ ಅಂಶವೆಂದರೆ ಈ ಮಕ್ಕಳನ್ನು ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಬಾಲ ಕಾರ್ಮಿಕರಾಗಿ ಕೆಲಸ ಮಾಡಲು ಕರೆದೊಯ್ಯಲಾಗುತ್ತಿತ್ತು. ಈಗ ಈ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ ಅವರ ಕುಟುಂಬಗಳಿಗೆ ತಲಾ ಮಾಸಿಕ 2ಸಾವಿರ ಸಹಾಯಧನ ನೀಡಲಾಗುತ್ತಿದೆ.

ಈ ನಿರ್ದೇಶನದಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಆ ಸಹ ಪ್ರಯಾಣಿಕ ಏನಾದರೂ ತನ್ನ ಸ್ವಾರ್ಥವನ್ನು ಯೋಚಿಸಿ ಊರಿನ ಉಸಾಬರಿ ನನಗೇಕೆಂದು ಸುಮ್ಮನಿದ್ದಿದ್ದರೆ ಆ 4ಮಕ್ಕಳ ಭವಿಷ್ಯ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಮುಗಿದುಹೋಗುತ್ತಿತ್ತು . ಯಾರು ಬಲ್ಲರು ಆ 4ಮಕ್ಕಳಲ್ಲಿ ಮುಂದೆ ಯಾರೋ ಒಬ್ಬ ವೈದ್ಯನಾಗಬಹುದು ನೂರಾರು ರೋಗಿಗಳ ಪ್ರಾಣ ಉಳಿಸಬಹುದು , ಎಂಜಿನಿಯರ್ , ವಕೀಲ , ವಿಜ್ಞಾನಿಯಾಗಿ ದೇಶದ ಆಸ್ತಿಯಾಗಬಲ್ಲರು. ಆ ಕ್ಷಣದಲ್ಲಿ ಸಹ ಮಾಡಿದ ಸಹಪ್ರಯಾಣಿಕ ಯಾವ ಹೀರೋಗೂ ಕಮ್ಮಿಯಿಲ್ಲ.
ಇನ್ನು ಮುಂದಾದರೂ ನಮ್ಮ ಕಣ್ಮುಂದೆ ನಡೆಯುವಂಥ ಇಂತಹ ಘಟನೆಗಳಿಗೆ ವೈಯಕ್ತಿಕವಾಗಿ ಆಸಕ್ತಿವಹಿಸಿ ಸಹಾಯ ಮಾಡೋಣ
ಮಕ್ಕಳ ಸಹಾಯವಾಣಿ 1098.

ಸಂಪಾದಕೀಯ ✒️ ಪ್ರಜಾಶಕ್ತಿ…