27/11/21 ಬೆಂಗಳೂರು ಗಾಂಧಿ ನಗರದ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕಛೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಒಕ್ಕೂಟದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಸಿಈ ರಂಗಸ್ವಾಮಿ ರವರನ್ನು, ಭೇಟಿ ಮಾಡಿ. ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 90ಜನ ಟಿವಿಸಿ ಸದಸ್ಯರಗಳು ಇದ್ದು, ಇದುವರೆಗೂ ಇವರುಗಳ ಸಭೆ ಕರೆಯದೆ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ, ಹಲವು ಬಾರಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ.
ನಮ್ಮ ಶಿವಮೊಗ್ಗ ನಗರದ ಜನಸಂಖ್ಯೆಯ ಆಧಾರದ ಮೇಲೆ ಬೀದಿ ಬದಿ ವ್ಯಾಪಾರದ ಗುರುತಿನ ಚೀಟಿ ಹಂಚಲಾಗಿದೆ. ಆದರೆ ನಗರದಲ್ಲೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಇರುವರು. ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಬೀದಿ ಬದಿಯ ವ್ಯಾಪಾರಿಗಳು ಇರುವರು.
ಕೆಲವು ಬೀದಿ ಬದಿ ವ್ಯಾಪಾರಿಗಳು ಬಂದು ನಾವುಗಳು ನಿಜವಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತೇವೆ, ನಾವು ಅರ್ಜಿ ಸಲ್ಲಿಸಿದರು ನಮಗೆ ಗುರುತಿನ ಚೀಟಿ ಸಿಕ್ಕಿಲ್ಲ.
ಕೆಲವು ಕಡೆ ಕುಟುಂಬದ ಅಷ್ಟು ಸದಸ್ಯರಿಗೆ ಗುರುತಿನ ಚೀಟಿ ನೀಡಿದರೆ. ಮತ್ತೆ ಕೆಲವು ಕಡೆ ಒಬ್ಬರಿಗೆ ಬೇರೆ ಬೇರೆ ಸ್ಥಳದ ಹೆಸರಿನಲ್ಲಿ ಗುರುತಿನ ಚೀಟಿ ನೀಡಲಾಗಿದೆ, ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ಅವರ ಕುಟುಂಬ ಸದಸ್ಯರು ಗುರುತಿನ ಚೀಟಿ ಪಡೆಯಲಾಗಿದೆ. ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವರಿಗೆ ಗುರುತಿನ ಚೀಟಿ ದೊರೆತಿದೆ ಸ್ವ ನಿಧಿ ಸಾಲಕ್ಕಾಗಿ ಬೀದಿ ಬದಿ ವ್ಯಾಪಾರಿಗಳಲ್ಲದೆ ಇರುವ ಎಲ್ಲರೂ ಅರ್ಜಿ ಸಲ್ಲಿಸಿರುವರು, ಎಂಬ ದೂರುಗಳು ಬರುತ್ತಿವೆ.
ಒಂದು ರೇಷನ್ ಕಾರ್ಡ್ ಕುಟುಂಬಕ್ಕೆ ಸರ್ಕಾರದ ನಿಯಮದಂತೆ ಒಂದೆ ಕಾರ್ಡ್ ಲಭಿಸುವಂತೆ ಒಂದು ಆಫ್ ಗಳ ಮೂಲಕ ಸರಿಪಡಿಸಲು ಹಾಗೂ ನಿಜವಾಗಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಕ್ಕೂ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ದುಡಿಮೆಗೆ ಗುರುತಿನ ಚೀಟಿ ಅವಶ್ಯಕ, ಸರ್ಕಾರ ಎಲ್ಲರಿಗೂ ಕೆಲಸ ನೀಡಲು ಆಗದು ಅವರು ಕಲಿತಂತ ವಿದ್ಯೆಯ ಮೂಲಕ ದುಡಿಮೆ ಮಾಡಿ ಸ್ವಾಭಿಮಾನಿಯಾಗಿ ಬದುಕಲಿ, ಇವರಿಗೆ ದುಡಿಮೆ ಇಲ್ಲದಿದ್ದರೆ ಅಡ್ಡ ದಾರಿಯ ಹಿಡಿದು ಕೊಲೆ ಸುಲಿಗೆಯ ಮೂಲಕ ದುಡಿಮೆಗೆ ಇಳಿಯದಂತೆ ಆಗದಿರಲಿ.
ರಾಜ್ಯ ಸರ್ಕಾರಕ್ಕೆ ಇದರ ಬಗ್ಗೆ ಗಮನಕ್ಕೆ ತಂದು ಟಿವಿಸಿ ಸದಸ್ಯರ ಮೂಲಕ ಸಮೀಕ್ಷೆಯ ಮಾಡಿ ನಿಜವಾದ ಫಲಾನುಭವಿಗಳಿಗೆ ಗುರುತಿನ ಚೀಟಿ ಸಿಗುವಂತೆ ಆಗಲಿ. ಎಂದು ಹೇಳಿದರು.
ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಸಿಈ ರಂಗಸ್ವಾಮಿ ರವರು, ಕರ್ನಾಟಕ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಯು ಉತ್ತಮ ಕಾರ್ಯ ನಿರ್ವಹಿಸುತ್ತಿದೆ, ಎಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೇಳುತ್ತಿರುವರು.
ಜಿಲ್ಲೆಯ ಎಲ್ಲಾ ಪಕ್ಷದ ನಾಯಕರು, ಪ್ರಮುಖರು, ಹಾಗೂ ಅಧಿಕಾರಿ ವರ್ಗದವರು ಬೀದಿ ಬದಿ ವ್ಯಾಪಾರಿ ಗಳಿಗೆ ಸಂಪೂರ್ಣ ಸಹಕಾರ ವಿದೆ ಎಂಬ ನಿಮ್ಮ ಮಾತು ಕೇಳಿ ಸಂತೋಷವಾಯಿತು.
ನಮ್ಮನ್ನ ಅಧ್ಯಕ್ಷರನ್ನಾಗಿ ಮಾಡಿ ಎಂದು ದಿನನಿತ್ಯ ಹಲವು ಜನರ ದಂಡೆ ಬರುತ್ತದೆ, ಅವರಿಗೆ ಅಧ್ಯಕ್ಷ ಮಾಡಿದ ಒಂದು ವಾರದ ನಂತರ ಕಾಣೆ ಯಾಗುವರು. ಮತ್ತೆ ಅವರಿಗೆ ಅ ಜಿಲ್ಲೆಯಿಂದ ರದ್ದು ಮಾಡಿ ಅ ಜಿಲ್ಲೆಗೆ ಬೇರೆ ಅಧ್ಯಕ್ಷರ ಹುಡುಕುವುದೆ ದೊಡ್ಡ ಸಮಸ್ಯೆ.
ಆದರೆ ಈ ಬಾರಿ ಶಿವಮೊಗ್ಗ ಜಿಲ್ಲೆಗೆ ಸಮರ್ಥ, ದಕ್ಷ, ಪ್ರಾಮಾಣಿಕ, ವ್ಯಕ್ತಿಯ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೆವೆ ಎಂದು ಬಹಳಷ್ಟು ಸಂತೋಷ ವಾಗುತ್ತದೆ ಎಂದು ಅಧ್ಯಕ್ಷರ ಪದಕವ ಕೊರಳಿಗೆ ಹಾಕಿ. ಪ್ರಮಾಣ ಪತ್ರವ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.