ನೀಟ್, ಪಿಜಿ ಕೌನ್ಸೆಲಿಂಗ್ ತ್ವರಿತಗೊಳಿಸಿ ಖಾಲಿ ಇರುವ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಬೇಕೆಂಬುದು ಸೇರಿದಂತೆ ಎಲ್ಲಾ ಬೇಡಿಕೆ ಈಡೇರಿಸುವವರೆಗೆ ರಾಜ್ಯ ಸ್ಥಾನಿಕ ವೈದ್ಯಾಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು ಎರಡನೇ ದಿನವಾದ ಇಂದು ಮೆಗ್ಗಾನ್ ಆಸ್ಪತ್ರೆಯಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

2018 -19 ರ ಶೈಕ್ಷಣಿಕ ವರ್ಷದ ಪ್ರಕಾರ ಶೈಕ್ಷಣಿಕ ಶುಲ್ಕಗಳನ್ನು 5 ಪಟ್ಟು ಏರಿಕೆ ಮಾಡಿದ್ದು, ಅದನ್ನು ಪುನರ್ ರಚಿಸಬೇಕು. 8 ತಿಂಗಳಿಂದ ಒತ್ತಡದ ನಡುವೆ ಸ್ಥಾನಿಕ ವೈದ್ಯರು ಹೆಚ್ಚುವರಿ ಕೋವಿಡ್ ಕೆಲಸ ಮಾಡಿದ್ದು, ಕೋವಿಡ್ ರಿಸ್ಕ್ ಭತ್ಯೆ ಪೂಡಲೇ ಪಾವತಿಸಬೇಕು ಮತ್ತು ನೀಟ್, ಪಿಜಿ ಕೌನ್ಸೆಲಿಂಗ್ ತ್ವರಿತಗೊಳಿಸಿ ಖಾಲಿ ಇರುವ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಬೇಕೆಂಬುದು ಆಗ್ರಹಿಸಿದರು.ಕೂಡಲೇ ಬೇಡಿಕೆ ಈಡೇರಿಸಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸ್ಥಾನಿಕ ವೈದ್ಯರ ಸಂಘದ ಅಧ್ಯಕ್ಷ ಡಾ. ನವೀನ್ ಪ್ರಸಾದ್, ಪ್ರಮುಖರಾದ ಡಾ. ನಮ್ರತಾ, ಡಾ. ಅವಿನಾಶ್, ಡಾ. ರಾಹುಲ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…