ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘವು ಹೊಸದಾಗಿ ಸ್ಥಾಪಿತಗೊಂಡಿದ್ದು . ಅಧ್ಯಕ್ಷರಾದ ಎಸ್ ಮಹೇಶ್ ಉಪಾಧ್ಯಕ್ಷರಾದ ರಮೇಶ್ ಹಾಗೂ ಮಧುಸೂದನ್ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ನಾಯ್ಕ್ ಖಜಾಂಚಿಗಳಾದ ಅರುಣ್ ಕುಮಾರ್ ಅವರು ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಕಂದಾಯ ಇಲಾಖೆ ಅತಿ ಮುಖ್ಯವಾದದ್ದು ಇದರಲ್ಲಿ ಕೆಲಸ ಮಾಡುತ್ತಿರುವಂಥ ಗ್ರಾಮಲೆಕ್ಕಾಧಿಕಾರಿಗಳ ಪಾತ್ರವು ಅವಿಸ್ಮರಣೀಯ ಇಂತಹ ಗ್ರಾಮ ಲೆಕ್ಕಾಧಿಕಾರಿಗಳ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಗುರುತಿಸಿ ಸರಕಾರಕ್ಕೆ ಮನದಟ್ಟು ಮಾಡಲು 1ಸಂಘದ ಅವಶ್ಯಕತೆ ಇತ್ತು ಆದುದರಿಂದ ಈ ಸಂಘ ಸ್ಥಾಪಿತವಾಗಿದೆ ಹಾಗೂ ಇ ಸಂಘಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಧ್ಯಕ್ಷರು ಧನ್ಯವಾದಗಳನ್ನು ತಿಳಿಸಿದರು.

ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ನಾಯ್ಕ ಅವರು ಮಾತನಾಡಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಇಲಾಖೆಯದೇ ಅಲ್ಲದೆ ಹಲವು ಹತ್ತು ಇಲಾಖೆಗಳ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಒದಗಿದೆ ಇದರಿಂದಾಗಿ ತೀವ್ರ ಒತ್ತಡದ ಕೆಲಸ ಇದಾಗಿದೆ. ಪೊಲೀಸ್ ಇಲಾಖೆ ಮಾದರಿಯಲ್ಲಿ ಗ್ರಾಮಲೆಕ್ಕಾಧಿಕಾರಿಗಳಿಗೆ ವರ್ಷಕ್ಕೊಮ್ಮೆ 1ತಿಂಗಳ ಸಂಬಳವನ್ನು ಉಚಿತವಾಗಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಸಮಸ್ತ ಗ್ರಾಮಲೆಕ್ಕಾಧಿಕಾರಿಗಳು ಕಾನೂನುಬದ್ಧವಾಗಿ ಸ್ಥಾಪಿತಗೊಂಡಿರುವ ಈ ಸಂಘದ ಪ್ರಸ್ತುತಪಡಿಸಬೇಕೆಂದು ಕೋರಿಕೊಂಡರು ಹಾಗೂ ಅನಧಿಕೃತವಾಗಿ ಸಂಘದ ಹೆಸರಿನಲ್ಲಿ ಯಾವುದೇ ವಹಿವಾಟುಗಳನ್ನು ನಡೆಸಲು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು
ವರದಿ ಮಂಜುಳಾ ರೆಡ್ಡಿ ಬೆಂಗಳೂರು