ಬೆಂಗಳೂರು : ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಸ್ಪರ್ಧೆ ಟ್ರಸ್ಟ್ ಅಧ್ಯಕ್ಷರಾದ ಜಸ್ಟಿಸ್ ಎನ್ ಕುಮಾರ್ ರವರು ಸಮಾನ ಮನಸ್ಕರ ವೇದಿಕೆಯಾದ ದೇಶಭಕ್ತಿಗೀತೆ ಗೀತ ಗಾಯನ ಹಾಗೂ ನೃತ್ಯ ಸ್ಪರ್ಧಾ ಸಮಿತಿಯ ವತಿಯಿಂದ ದೇಶಭಕ್ತಿ ಗೀತೆ ಗಾಯನ ಹಾಗೂ ನೃತ್ಯ ಸ್ಪರ್ಧೆಗಳನ್ನು ಆನ್ಲೈನ್ನಲ್ಲಿ ಏರ್ಪಡಿಸುವ ಮೂಲಕ ವಿಶ್ವಾದ್ಯಂತ ಭಾರತೀಯರಿಗೆ ನಮ್ಮ ಸಂವಿಧಾನ ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಆಂದೋಲನವನ್ನು ಸಾರ್ವಜನಿಕವಾಗಿ ಹಮ್ಮಿಕೊಳ್ಳಲಾಗಿದೆ .
ಸ್ಪರ್ಧೆಯ ವಿವರಗಳು ಈ ಕೆಳಗಿನಂತಿವೆ
ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಸ್ಪರ್ಧೆ ( 5ವರ್ಷ ಮೇಲ್ಪಟ್ಟ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ)
ಮುಂಬರುವ ಜನವರಿ ರ ಗಣರಾಜ್ಯೋತ್ಸವ ದಿನದಂದು ಬೆಳಿಗ್ಗೆ 10.30 ರಿಂದ 11.30ರವರೆಗೆ ಸಾಮೂಹಿಕ ಗೀತಗಾಯನ ಮತ್ತು ನೃತ್ಯಗಳ ಸಮರ್ಪಣೆಯನ್ನು ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿಯೂ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ದೇಶಭಕ್ತಿ ಗೀತೆ ಚಿಂತನ ಮಂಥನ ಕಾರ್ಯಕ್ರಮವನ್ನು ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ವರ್ಷಪೂರ್ತಿ ನಡೆಸಲು ಸಮಿತಿ ತೀರ್ಮಾನಿಸಲಾಗಿದೆ

ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ಸಮಿತಿಯ ವೆಬ್ ಸೈಟ್ www.deshabhakthi.com ಮೂಲಕ ಐವತ್ತು ರೂಪಾಯಿಗಳ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು .
https://www.facebook.com/groups/272575287887495/?ref=share

ಈ ಸಂದರ್ಭದಲ್ಲಿ ಸಂಚಾಲಕರಾದ ರವಿ ಹೊಯ್ಸಳ ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು .

ವರದಿ ಮಂಜುಳಾ ರೆಡ್ಡಿ ಬೆಂಗಳೂರು