ಡಿ. ೨. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮತ್ತು ಕಸಾಪ ಆಜೀವ ಸದಸ್ಯರು ಇಂದು ಮಾನ್ಯ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಜಿಲ್ಲೆಯಲ್ಲಿ ಕನ್ನಡಪರ ಚಟುವಟಿಕೆಗಳಿಗೆ ಆಡಳಿತದ ಸಹಕಾರ ಕೋರಿದರು. ಸಾಹಿತ್ಯ ಗ್ರಾಮ ಯೋಜನೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಅವುಗಳ ಸಂಪೂರ್ಣ ಕಡತವನ್ನು ಸಂಬಂಧಿಸಿದವರಿಂದ ಕೊಡಿಸಿಕೊಡಲು ಹಕ್ಕೊತ್ತಾಯ ಪತ್ರವನ್ನು ನೀಡಲಾಯಿತು.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮಂದಿರಕ್ಕೆ ಭೇಟಿ ನೀಡಿ ಸಹಾಯಕ ನಿರ್ದೇಶಕರು ಮತ್ತು ಆಡಳಿತಾಧಿಕಾರಿಗಳಾದ ಮಾನ್ಯ ಉಮೇಶ್ ಅವರಿಗೆ ನೀಡಲಾಯಿತು. ನೀವು ಸಂಬಂಧಿಸಿದವರನ್ನು ಸಂಪರ್ಕಮಾಡಿ ನಾವು ಆಡಳಿತಾಧಿಕಾರಿಗಳಿಗೆ ಈ ಹಿಂದೆ ನೀಡಿದ ದಾಖಲೆಗಳ ಮಾಹಿತಿಯಂತೆ ನಿಮ್ಮ ಕಚೇರಿಯ ದಾಖಲೆಗಳಂತೆ ಕಡತಗಳನ್ನು ಒದಗಿಸಿ ಎಂದು ಒತ್ತಾಯಿಸಿದ್ದೇವೆ. ತುರ್ತು ಚಟುವಟಿಕೆ ಆರಂಭಿಸಲು ಅಗತ್ಯ ನೆರವಾಗಲು ಕೋರಿದ್ದೇವೆ.