
ದಿನಾಂಕ:01-12-2021 ರಂದು ಮಧ್ಯಾಹ್ನ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಟಪ್ಪನ ಕ್ಯಾಂಪ್ ಹತ್ತಿರದ ಲೇಔಟ್ ನಲ್ಲಿ ನಾಲ್ಕು ಜನರು 2 ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ತುಂಗಾ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ.

ಆರೋಪಿತರಾದ 1) ನರಸಿಂಹ 24 ವರ್ಷ ಬಳ್ಳಾರಿ, 2) ಇಮ್ರಾನ್, 24 ವರ್ಷ ಟಿಪ್ಪು ನಗರ ಶಿವಮೊಗ್ಗ 3) ಕಾಶಿಪ್ 19 ವರ್ಷ ಟಿಪ್ಪು ನಗರ ಶಿವಮೊಗ್ಗ, 4) ಜಾಹೀರ್ 35ವರ್ಷ ಬಳ್ಳಾರಿ ಇವರುಗಳನ್ನು ದಸ್ತಗಿರಿ ಮಾಡಿ ಆರೋಪಿತ ರಿಂದ ಅಂದಾಜು ಮೌಲ್ಯ 45000 ರೂಗಳ ಒಟ್ಟು 1 ಕೆಜಿ 550 ಗ್ರಾಂ ತೂಕದ ಮಾದಕವಸ್ತು ಒಣ ಗಾಂಜಾ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2 ದ್ವಿ ಚಕ್ರ ವಾಹನ ಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0386/2021 ಕಲಂ 20(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.