ರಾಜ್ಯದಲ್ಲೇ ಮೊದಲ ಬಾರಿಗೆ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ತಯಾರಿಸಲಾಗುತ್ತಿರುವ ರಸಗೊಬ್ಬರಗಳು
-ಆಮದು ರಾಸಾಯನಿಕಗಳ ಕೊರತೆಯನ್ನ ತಪ್ಪಿಸುವ ನಿಟ್ಟಿನಲ್ಲಿ “ಮೇಕ್ ಇನ್ ಇಂಡಿಯಾ” ಕಾನ್ಸೆಪ್ಟ್‌ನಲ್ಲಿ ದೇಶದಲ್ಲೇ ಸಿಗುವ ಕಚ್ಚಾವಸ್ತುಗಳಿಂದ ನೂತನ ಉತ್ಪನ್ನಗಳ ತಯಾರಿಕೆ
-ಮ್ಯೊಲ್ಯಾಸಿಸ್ ನಿಂದ ತಯಾರಿಸಲಾದ ಪೊಟ್ಯಾಶ್, ಪಾಸ್ಫೇಟ್ ರಿಚ್ ಆಗ್ಯಾರ್ನಿಕ್ ಮನ್ಯೂರ್, ನೀಮ್ ನಂತಹ ಪದಾರ್ಧಗಳ ಬಳಕೆ
ನೈಸರ್ಗಿಕ ಹಾಗೂ ಸಾವಯವ ಕಚ್ಚಾವಸ್ತುಗಳನ್ನು ಬಳಸಿಕೊಂಡು ರಾಜ್ಯದಲ್ಲೇ ಪ್ರಪ್ರಥಮವಾಗಿ ಉತ್ಪಾದಿಸಲಾಗುತ್ತಿರುವ ಚಿತ್ತಾರಿ ಅಗ್ರಿಕೇರ್ ನ ನ್ಯೂಟ್ರಿಮೇಂಟ್ ರಸಗೊಬ್ಬರಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದ ಚಿತ್ತಾರಿ ಅಗ್ರಿಕೇರ್ ಹಾಗೂ ಬಯಾರ್ಡ್ ಅಗ್ರೋಸೈನ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಪಿ. ವಿಜಯಕುಮಾರ್ ಶೆಟ್ಟಿ, ಕರೋನಾ ಸಾಂಕ್ರಾಮಿಕದ ಕಾರಣದಿಂದ ವಿಶ್ವದಾದ್ಯಂತ ರಸಗೊಬ್ಬರಗಳ ಉತ್ಪಾದನೆಗೆ ಬಳಸಲಾಗುವ ರಾಸಾಯನಿಕಗಳ ಕೊರತೆಯಿದೆ. ಅದರಲ್ಲೂ ಪೆಟ್ರೋಯಲಿಂ ಉತ್ಪನ್ನಗಳ ಕೊರತೆಯೂ ಇದೆ. ಇದರಿಂದಾಗಿ ದೇಶದಲ್ಲಿ ರಸಗೊಬ್ಬರದ ಉತ್ಪಾದನೆ ಕಡಿಮೆಯಾಗಿದ್ದು, ರಸಗೊಬ್ಬರಗಳ ಕೊರತೆಯಿಂದ ರೈತರಿಗೆ ತೊಂದರೆ ಆಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ನೈಸರ್ಗಿಕವಾಗಿ ದೊರೆಯುವಂತಹ ಮೊಲ್ಯಾಸಿಸ್ ನಿಂದ ತಯಾರಿಸಲಾದ ಪೊಟ್ಯಾಶ್, ಪಾಸ್ಫೇಟ್ ರಿಚ್ ಆಗ್ಯಾರ್ನಿಕ್ ಮನ್ಯೂರ್, ನೀಮ್ ಹಾಗೂ ಸೀವೀಡ್ ಮತ್ತು ಹ್ಯೂಮಿಕ್ ಬಾಲ್‌ಗಳನ್ನು ಬಳಸಿಕೊಂಡು ರಸಗೊಬ್ಬರಗಳನ್ನು ತಯಾರಿಸಿದ್ದೇವೆ. ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತಯಾರಿಸುತ್ತಿರುವ ಸಂಸ್ಥೆ ಎನ್ನುವ ಹೆಗ್ಗಳಿಕೆ ನಮ್ಮದು.
ನಿರ್ದೇಶಕರಾದ ಗಣೇಶ್ ಹೆಗ್ಡೆ ಮಾತನಾಡಿ, ದೇಶದ ಹಾಗೂ ರಾಜ್ಯದ ರೈತರಿಗೆ ಸಾವಯವ ರಸಗೊಬ್ಬರಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯ ವತಿಯಿಂದ ನಾನ್ ಎಡಿಬಲ್ ಡಿ-ಆಯಿಲ್ಡ್ ನೀಮ್ ಕೇಕ್ ಆಗಿರುವ ನಂದಿ, ಸೀ ವೀಡ್ ಬಳಸಿಕೊಂಡು ತಯಾರಿಸಲಾಗಿರುವ ಸಮುದ್ರ, ಮ್ಯೋಲ್ಯಾಸಿಸ್ ನಿಂದ ತಯಾರಿಸಲಾಗಿರುವ ಪೊಟ್ಯಾಶ್ ಹೊಂದಿರುವ ವಜ್ರ, ಫಾಸ್ಪೇಟ್ ರಿಚ್ ಆಗ್ಯಾನಿಕ್ ಮನ್ಯೂರ್ ಹೊಂದಿರುವ ಭೂಮಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದೇವೆ. ರೈತರುಗಳು ರಾಸಾಯನಿಕ ಬಳಸದೇ ಇರುವ ಸಾವಯವ ರಸಗೊಬ್ಬರಗಳನ್ನು ಬಳಸಿರುವ ರಸಗೊಬ್ಬರಗಳನ್ನು ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿ, ರಾಯಚೂರಿನ ಸಾಗರ್ ಎಂಟರ್‌ಪ್ರೈಸಸ್‌ನ ಮಾಲೀಕರಾದ ಶ್ರೀನಿವಾಸ್, ಬಾಗೋಡಿ ಟ್ರೇಡಿಂಗ್ ನ ಮಾಲೀಕರಾದ ದೇವರಾಜ್, ರೀಜನಲ್ ಮ್ಯಾನೇಜರ್ ರಾಮಯ್ಯ ಸಂಧರ್ಭದಲ್ಲಿ ಉಪಸ್ಥಿತರಿದ್ದರು.