“ಭಾರತವು ಕೊವಿಡ್-19 ಲಸಿಕೆ ವಿತರಣೆಯಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. 125 ಕೋಟಿಗೂ ಅಧಿಕ ಡೋಸ್ ಲಸಿಕೆ ವಿತರಿಸಿರುವುದಕ್ಕಾಗಿ ಶರ್ಮಿಸಿದ ಎಲ್ಲ ವೈದ್ಯಕೀಯ ಸಿಬ್ಬಂದಿಗಳಿಗೆ ಅಭಿನಂದನೆಗಳು… ನಮ್ಮ ಮೊದಲ ಶ್ರೇಣಿಯ ಯೋಧರು ಹಾಗೂ ನಾಗರಿಕರ ಸಹಕಾರದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ವಿಶ್ವದಲ್ಲಿ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದೆ,”…
ಈ ಸಂಧರ್ಭದಲ್ಲಿ ಅತ್ಯಂತ ಆಶ್ಚರ್ಯ ಎಂಬಂತೆ ಓಮಿಕ್ರಾನ್ (Omicron) ರೂಪಾಂತರವು ಭಾರತದಲ್ಲಿ ಬಿಡುಗಡೆಯಾಗಿದೆ. ಇತ್ತೀಚೆಗೆ, ಭಾರತದಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿತು… ಆರೋಗ್ಯ ಸಚಿವಾಲಯದ ಪ್ರಕಾರ, ಕರ್ನಾಟಕದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ…
ಒಮಿಕ್ರಾನ್ ಅತ್ಯಂತ ವೇಗದ ಗತಿಯಲ್ಲಿ ಹರಡುತ್ತದೆ ಎಂದು ವರದಿಯಾಗಿದ್ದು ಮುಂದಿನ ದಿನಗಳಲ್ಲಿ ಇದರ ತೀವ್ರತೆ ಹೆಚ್ಚುವ ಮೊದಲು ನಾವೆಲ್ಲರು ಎಚ್ಚರಿಕೆವಹಿಸಬೇಕಾಗಿದೆ…
ಹಾಗಾಗಿ ಇನ್ನೂ ಯಾರ್ ಯಾರು 2ನೇ ಡೋಸ್ ಲಸಿಕೆ ಆಗಿಲ್ಲ ಅಂತವರನ್ನು ಹುಡಿಕಿ 2ನೇ ಡೋಸ್ ಗೆ ತ್ವರಿತವಾಗಿ ಕಳುಹಿಸಿಕೊಡಬೇಕು ಹಾಗೂ ಇದಕ್ಕೆ ಸಂಭಂದಪಟ್ಟ ಸಮೀಪದ ಲಸಿಕಾ ಕೇಂದ್ರ/PHC, ಅಂಗನವಾಡಿ, ಆಶಾಕಾರ್ಯಕರ್ತರೊಂದಿಗೆ ಮಾತನಾಡಿ 2 ನೇ ಡೋಸ್ ಗೆ ಇನ್ನು ಯಾರು ಬಾಕಿ ಉಳಿದಿದ್ದಾರೆಂದು ಹಾಗೂ ಇನ್ನು ಕೂಡ ಯಾರು ಲಸಿಕೆ ಪಡೆದಿಲ್ಲ ಎಂಬುದನ್ನು ಗಮನಿಸಿ ಅವರನ್ನು ತಕ್ಷಣ ಲಸಿಕಾ ಕೇಂದ್ರಗಳಿಗೆ ಲಸಿಕೆಗಾಗಿ ಕಳುಹಿಸಿಕೊಡುವಂತೆ ತಾವೆಲ್ಲರು ಕಾರ್ಯೋನ್ಮುಖರಾಗಬೇಕು ಎಂದು ಕೋರುತ್ತಾನೆ….
ಎಸ್ ದತ್ತಾತ್ರಿ ಜಿಲ್ಲಾ ಸಂಚಾಲಕರು,
ಕರೋನ ಲಸಿಕಾ ಅಭಿಯಾನ ಶಿವಮೊಗ್ಗ ಜಿಲ್ಲೆ…